ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರ ಮನಸ್ಸಿನಲ್ಲಿ ಕಪಲ್ ಎಂದರೆ ಹೀಗಿರಬೇಕು ಅಂದುಕೊಂಡಿದ್ದು ಸಮಂತಾ ಹಾಗೂ ನಾಗಚೈತನ್ಯ ಜೋಡಿ.. ಆದರೆ ಕೆಲವೇ ವರ್ಷಗಳಲ್ಲಿ ಈ ಸಂಬಂಧ ಮುರಿದು ಬಿದ್ದಿದೆ.
ನಿನ್ನೆಯಷ್ಟೇ ನಟ ನಾಗಚೈತನ್ಯ ಸೋಭಿತಾ ಧುಲಿಪಾಲ ಕೈಬೆರಳಿಗೆ ಉಂಗುರ ತೊಡಿಸಿ ನಾವಿಬ್ಬರು ಒಂದೇ ಎಂದಿದ್ದಾರೆ. ಆದರೆ ನಿನ್ನೆ ಸಮಂತಾ ನಾಗಚೈತನ್ಯಗೆ ಪ್ರಪೋಸ್ ಮಾಡಿದ ದಿನವಾಗಿದೆ.
ಹೌದು, ನಟಿ ಸಮಂತಾ ಹಾಗೂ ನಾಗಚೈತನ್ಯ ಡೇಟಿಂಗ್‌ನಲ್ಲಿದ್ದರೂ ಸಮಂತಾ ನಾಗಚೈತನ್ಯಗೆ ಪ್ರಪೋಸ್ ಮಾಡಿದ್ದರು. ನಾಗಚೈತನ್ಯ ಅದಕ್ಕೆ ಒಕೆ ಮಾಡಿದ್ದರು. ಆಗಸ್ಟ್ ಎಂಟರಂದು ಈ ಸಿಹಿಘಟನೆ ನಡೆದಿದ್ದು, ಪ್ರತಿ ವರ್ಷವೂ ಆಗಸ್ಟ್ ಎಂಟನ್ನು ತಮ್ಮ ಪ್ರೀತಿಯ ದಿನವನ್ನಾಗಿ ಆಚರಣೆ ಮಾಡ್ತಾ ಇದ್ದರು. ಆದರೆ ಇದೇ ದಿನದಂದು ಬೇರೆ ಹುಡುಗಿ ಜೊತೆಗೆ ನಾಗಚೈತನ್ಯ ಎಂಗೇಜ್ ಆಗಿದ್ದಾರೆ.
ಇದು ನಾಗಚೈತನ್ಯ ರಿವೇಂಜ್ ಎಂದು ಸಮಂತಾ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.