Monday, October 2, 2023

Latest Posts

ತಮಿಳು ನಟಿ ನಯನತಾರಾ ಮನೆಯಲ್ಲಿ ಓಣಂ ಸಂಭ್ರಮ: ಪುಟಾಣಿ ಮಕ್ಕಳಿಗೆ ಮೊದಲ ಹಬ್ಬ ಎಂದ ಪತಿ ವಿಘ್ನೇಶ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ದೇಶದ ವಿವಿಧ ಭಾಗಗಗಲ್ಲಿ ಓಣಂ ಸಂಭ್ರಮ. ಕೇರಳ ರಾಜ್ಯದ ವಿಶಿಷ್ಟ ಹಬ್ಬವಾದ ಓಣಂ ಅನ್ನು ಎಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.

ತಮಿಳು ನಟಿ ನಯನತಾರಾ ಕೂಡ ತಮ್ಮ ಮನೆಯಲ್ಲಿ ಹಬ್ಬವನ್ನು ಕುಟುಂಬ ಜೊತೆಗೆ ಆಚರಿಸಿಕೊಂಡಿದ್ದಾರೆ.
ನಯನತಾರಾ ಪತಿ ವಿಘ್ನೇಶ್ ಶಿವನ್ ಹಾಗು ಉಯಿರ್ ಮತ್ತು ಉಲಗಂ ಎಂಬ ಅವಳಿ ಗಂಡು ಮಕ್ಕಳ ಜೊತೆಗೆ ಭಾನುವಾರ ಸರಳವಾಗಿ ಓಣಂ ಆಚರಿಸಿದ್ದ್ದಾರೆ.

ಅಕ್ಟೋಬರ್ 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗಂಗೆ ವಿಘ್ನೇಶ್ ಶಿವನ್ ಮತ್ತು ನಯನತಾರಾ ಪೋಷಕರಾಗಿದ್ದಾರೆ. ಮಕ್ಕಳ ಜೊತೆಗೆ ಮೊದಲ ಓಣಂ ಅನ್ನು ಆಚರಿಸಿರುವ ಈ ದಂಪತಿ, Instagramನಲ್ಲಿ ಅದರ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅವಳಿ ಮಕ್ಕಳು ಸಾಂಪ್ರದಾಯಿಕ ಪಂಚೆ ಧರಿಸಿ ತಮ್ಮ ಮೊದಲ ಓಣಂ ಅನ್ನು ಆಚರಿಸುತ್ತಿದ್ದಾರೆ.
ಓಣಂ ಹಬ್ಬಕ್ಕಾಗಿ ನಯನತಾರಾ ಬಿಳಿ ಸಲ್ವಾರ್ ಧರಿಸಿದ್ದರೆ, ವಿಘ್ನೇಶ್ ಶಿವನ್ ಬಿಳಿ ಶರ್ಟ್ ಮತ್ತು ಪಂಚೆ ಧರಿಸಿದ್ದಾರೆ. ಫೋಟೋಗಳಲ್ಲಿ, ಮಕ್ಕಳಿಬ್ಬರೂ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಹಬ್ಬದ ಊಟ ಮಾಡುತ್ತಿದ್ದಾರೆ.

ವಿಘ್ನೇಶ್ ಶಿವನ್ ಮಕ್ಕಳ ಫೋಟೋಗಳನ್ನು ಶೇರ್ ಮಾಡಿ, “ನನ್ನ ಉಯಿರ್ ಮತ್ತು ಉಲಗಮ್‌ನೊಂದಿಗೆ ಮೊದಲ ಓಣಂ. ದೇವರ ಆಶೀರ್ವಾದ. ಹಬ್ಬವು ಇಲ್ಲಿ ಬೇಗ ಆರಂಭವಾಗುತ್ತದೆ. ಮುಂಚಿತವಾಗಿಯೇ ಎಲ್ಲರಿಗೂ ಓಣಂ ಹಬ್ಬದ ಶುಭ ಹಾರೈಸುತ್ತೇನೆ” ಎಂದು ಹೇಳಿದ್ದಾರೆ.

ವಿಘ್ನೇಶ್ ಶಿವನ್ ಮತ್ತು ನಯನತಾರಾ 2015 ರಲ್ಲಿ ನಾನುಮ್ ರೌಡಿ ಧಾನ್ ಸಿನಿಮಾ ಸೆಟ್‌ನಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು. ಚಿತ್ರದ ಸೆಟ್‌ನಲ್ಲಿ ಒಟ್ಟಿಗೆ ಸಮಯ ಕಳೆದು ಡೇಟಿಂಗ್ ಮಾಡಲು ಪ್ರಾರಂಭಿಸಿದರು. 2021 ರಲ್ಲಿ, ವಿಘ್ನೇಶ್ ಶಿವನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಚಿತ್ರದಲ್ಲಿ ನಯನತಾರಾ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿ, ತಾವು ಎಂಗೇಜ್ ಎಂದು ಬಹಿರಂಗಪಡಿಸಿದ್ದರು.ಒಂದು ವರ್ಷದ ನಂತರ, ಈ ಜೋಡಿ ಜೂನ್ 9, 2022 ರಂದು ವಿವಾಹವಾದರು. ಅಕ್ಟೋಬರ್ 9, 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಅವರು ಅವಳಿ ಗಂಡು ಮಕ್ಕಳಾದ ಉಯಿರ್ ರುದ್ರೋನೀಲ್ ಎನ್ ಶಿವನ್ ಮತ್ತು ಉಲಗಂ ದೈವಿಕ್ ಎನ್ ಶಿವನ್ ಎಂಬ ಮಕ್ಕಳಿಗೆ ಫೋಷಕರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!