ಮತ್ತೊಮ್ಮೆ ಹೆಚ್​ಎಸ್​ಆರ್​ಪಿ ನಂಬರ್​​ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಳೇ ವಾಹನಗಳಿಗೆ ಹೆಚ್​ಎಸ್​ಆರ್​ಪಿ ನಂಬರ್​​ ಪ್ಲೇಟ್ ಅಳವಡಿಸಲು ಮತ್ತೊಮ್ಮೆ ಗಡುವು ವಿಸ್ತರಣೆಯಾಗಿದೆ. ಮಾರ್ಚ್​ 31ರವರೆಗೆ ಗಡುವು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜನವರಿ 31ರವರೆಗೆ ನಂಬರ್​​ ಪ್ಲೇಟ್ ಅಳವಡಿಕೆಗೆ ಗಡುವು ನೀಡಲಾಗಿತ್ತು. ಇದೀಗ ಸಾರಿಗೆ ಇಲಾಖೆ ಮತ್ತೆ ಮಾರ್ಚ್​ 31ರವರೆಗೆ ಗಡುವು ವಿಸ್ತರಿಸಿದೆ. ಈವರೆಗೆ 6 ಬಾರಿ ಹೆಚ್​ಎಸ್​ಆರ್​ಪಿ ನಂಬರ್​​ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆಯಾಗಿದೆ.

ಕರ್ನಾಟಕದಲ್ಲಿ ಸುಮಾರು 2 ಕೋಟಿಯಷ್ಟು ಹಳೆಯ ವಾಹನಗಳಿವೆ. ಇದರಲ್ಲಿ 58 ಲಕ್ಷ ವಾಹನಗಳಿಗೆ ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆಯಾಗಿವೆ. 2019ರ ಏಪ್ರಿಲ್​ 1ರ ಹಿಂದಿನ ಎಲ್ಲ ವಾಹನಗಳಿಗೆ ಹೆಚ್​ಎಸ್​ಆರ್​ಪಿ ನಂಬರ್ ಪ್ಲೇಟ್​ ಅಳವಡಿಸಿಕೆ ಕಡ್ಡಾಯವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!