ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲದಿನಗಳ ಹಿಂದೆಯಷ್ಟೇ ಆನೆ ದಾಳಿ ನಡೆದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಹಸಿಯಾಗಿರುವಾಗಲೇ ಕೇರಳದ ವಯನಾಡಿನ ಪಡಮಲದ ಜನವಸತಿ ಪ್ರದೇಶದಲ್ಲಿ ಹುಲಿಯೊಂದು ಕಾಣಿಸಿಕೊಂಡು ಗ್ರಾಮಸ್ಥರ ನಿದ್ದೆಗೆಡಿಸಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಬೆಳಗ್ಗೆ 6:30ರ ಸುಮಾರಿಗೆ ಇಲ್ಲಿನ ಚರ್ಚ್‌ಗೆ ತೆರಳುವ ದಾರಿಯಲ್ಲಿ ಹುಲಿ ಕಾಣಸಿಕ್ಕಿದೆ. ಇಲ್ಲಿ ನಡೆದು ಹೋಗುತ್ತಿರುವ ವ್ಯಕ್ತಿಯೋರ್ವರನ್ನು ಕೆಲ ದೂರ ಹಿಂಬಾಲಿಸಿದ್ದ ಹುಲಿ ಬಳಿಕ ಪೊದೆಯತ್ತ ಹಾರಿ ಪರಾರಿಯಾಗಿದೆ. ಹುಲಿ ರಸ್ತೆ ದಾಟಿ ಪಕ್ಕದ ಬೆಟ್ಟವನ್ನೇರಿದೆ. ಇದೇ ಪರಿಸರದಲ್ಲಿ ಕೆಲದಿನಗಳ ಹಿಂದೆಯಷ್ಟೇ ಆನೆಯೊಂದು ವ್ಯಕ್ತಿಯನ್ನು ತುಳಿದು ಕೊಂದಿತ್ತು. ಇದರ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.