ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿ
ಶುಚಿಮಾಡಿದ ಹಲಸಿನ ಸೊಳೆಗಳು ಅರ್ಧ ಕೆಜಿ
ಸಕ್ಕರೆ ಅರ್ಧ ಕೆಜಿ
ನೀರು
ಚಿಟಿಕೆ ಉಪ್ಪು
ಚಿಟಿಕೆ ಅರಶಿನ
ಮಾಡುವ ವಿಧಾನ:
ಹಲಸಿನ ಹಣ್ಣನ್ನು ತುಂಡುಮಾಡಿ ಸೊಳೆಗಳನ್ನು ಬಿಡಿಸಿ, ಶುಚಿಗೊಳಿಸಿ ಪಾತ್ರೆಯಲ್ಲಿಡಿ. ಸ್ವಲ್ಪ ನೀರು ಹಾಕಿ ಬೇಯಿಸಿ ಮಿಕ್ಸಿಯಲ್ಲಿ ಹಾಕಿ ತಿರುಗಿಸಿಕೊಳ್ಳಿ. ನುಣ್ಣಗಾದಾಗ ತೆಗೆಯಿರಿ. ಮತ್ತೊಂದು ಪಾತ್ರೆಯಲ್ಲಿ ಸಕ್ಕರೆ ಹಾಗೂ ನೀರು ಸೇರಿಸಿ ಕುದಿಸಿ, ನೂಲುಪಾಕಬರುವಂತೆ ಮಾಡಿ. ಪಾಕ ತಣ್ಣಗಾದಾಗ ರುಬ್ಬಿದ ಹಲಸಿನ ಹಣ್ಣು, ಚಿಟಿಕಿ ಅರಶಿನ , ಚಿಟಿಕೆ ಉಪ್ಪು ಸೇರಿಸಿ ಗೊಟಾಯಿಸಿ ಬಾಟಲಿಯಲ್ಲಿ ತುಂಬಿಡಿ. ಬೇಕಾದಾಗ ಹಾಲು/ನೀರಿನೊಂದಿಗೆ ಬೆರೆಸಿ ಉಪಯೋಗಿಸಿ.