Sunday, March 26, 2023

Latest Posts

ವಾಷಿಂಗ್​ ಮಷಿನ್​​ ಗೆ ಬಿದ್ದು ಪವಾಡ ಸದೃಶವಾಗಿ ಬದುಕಿದ ಒಂದೂವರೆ ವರ್ಷದ ಕಂದಮ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ವಾಷಿಂಗ್​ ಮಷಿನ್​ಗೆ ಬಿದ್ದು ಒಂದೂವರೆ ವರ್ಷದ ಮಗು 15 ನಿಮಿಷ ಅಲ್ಲೇ ಇದ್ದು, ಪವಾಡ ಸದೃಶವಾಗಿ ಬದುಕಿ ಉಳಿದಿದೆ.
ಬಳಿಕ ವಸಂತ್ ಕುಂಜ್​​ನಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ 12 ದಿನ ಚಿಕಿತ್ಸೆ ನೀಡಿ, ಬದುಕಿಸಲಾಗಿದೆ.

ಮನೆಯಲ್ಲಿರುವ ಟಾಪ್​ ಲೋಡ್​ ವಾಷಿಂಗ್​ ಮಷಿನ್​ನಲ್ಲಿ ತಾಯಿ, ಬಟ್ಟೆ ತೊಳೆಯುವ ಪೌಡರ್​ ಮಿಶ್ರಿತ ನೀರು ತುಂಬಿಸಿಟ್ಟು, ಕೋಣೆಗೆ ಬಟ್ಟೆ ತರಲೆಂದು ಹೋಗಿದ್ದಳು. ಆಗ ಮಗು ಅದರಲ್ಲಿ ಬಿದ್ದಿದೆ. ಸುಮಾರು 15 ನಿಮಿಷದ ನಂತರ ಗೊತ್ತಾಗಿದೆ. ಅಷ್ಟರಲ್ಲಿ ಮಗು ನೀರಿನಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಚಲನವಲನ ಸ್ತಬ್ಧವಾಗಿತ್ತು ಮತ್ತು ಉಸಿರಾಟ ಕ್ಷೀಣವಾಗಿತ್ತು.

ಬಳಿಕ ಆಸ್ಪತ್ರೆ ಗೆ ದಾಖಲಾಯಿಸಲಾಯಿತು. ಮಗುವಿಗೆ ಚಿಕಿತ್ಸೆ ನೀಡಿದ ಮಕ್ಕಳ ತಜ್ಞೆ ಡಾ. ಹಿಮಾಂಶಿ ಜೋಶಿ ‘ಮಗುವನ್ನು ಆಸ್ಪತ್ರೆಗೆ ತರುವಾಗ ಪ್ರಾಣಕ್ಕೆ ಅಪಾಯ ಆಗುವ ಸ್ಥಿತಿಯಲ್ಲಿಯೇ ಇತ್ತು. ಸೋಪಿನ ನೀರಿನಲ್ಲಿ ಮುಳುಗಿದ್ದರಿಂದ, ಮಗುವಿನ ವಿವಿಧ ಅಂಗಗಳೆಲ್ಲ ನಿಶ್ಚಲವಾಗಿದ್ದವು. ಮಗುವಿಗೆ ಆಯಂಟಿಬಯೋಟಿಕ್​ಗಳನ್ನು ಕೊಟ್ಟು, ವೆಂಟಿಲೇಟರ್​​ನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಯಿತು. ಬಳಿಕ ನಿಧಾನವಾಗಿ ಅದು ಚೇತರಿಸಿಕೊಂಡಿದೆ’ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!