ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬೆಂಗಳೂರಿನ ವಿಶ್ವ ಪ್ರಸಿದ್ಧ ಐತಿಹಾಸಿಕ ಕರಗ ಮಹೋತ್ಸವವು ಕೆಲವು ದಿನಗಳ ಹಿಂದಷ್ಟೇ ವಿಜೃಂಭಣೆಯಿಂದ ನಡೆಯಿತು. ಉತ್ಸವದಲ್ಲಿ ಕರಗ ಹೊತ್ತಿದ್ದವರ ಕೊಲೆಗೆ ಸಂಚು ನಡೆದಿತ್ತು ಎಂಬುದು ಸಿಸಿಟಿವಿಯಿಂದ ಬಹಿರಂಗವಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರಿನ ಕರಗ ಉತ್ಸವದಲ್ಲಿ ದ್ರೌಪದಮ್ಮನ ಕರಗವನ್ನು ಜ್ಞಾನೇಂದ್ರ ಎಂಬುವವರು ಹೊತ್ತಿದ್ದರು. ದೇವರು ಹೊತ್ತ ಜ್ಞಾನೇಂದ್ರರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಅಂಶ ತಡವಾಗಿ ಬೆಳಕಿದೆ ಬಂದಿದೆ.
ಕರಗ ಉತ್ಸವದ ವೇಳೆ ವ್ಯಕ್ತಿಯೊಬ್ಬ ನನ್ನ ಮೇಲೆ ರಾಸಾಯನಿಕ ಮತ್ತು ಖಾರದಿ ಪುಡಿ ಎರಚಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಸ್ವತಃ ಜ್ಞಾನೇಂದ್ರ ಅವರೇ ಮಂಗಳವಾರ ನಗರದ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣ ಸಂಬಂಧ ಅನುಮಾನಾಸ್ಪದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.