ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದ್ದು, ಐವರಲ್ಲಿ ಒಬ್ಬ ಶಂಕಿತ ಉಗ್ರ ಸೂಸೈಡ್ ಬಾಂಬರ್ ಆಗಿದ್ದಾನೆ. ಆರೋಪಿಗಳ ಬಳಿ 36 ಎಚ್‌ಇ ಮಾದರಿಯ ಗ್ರೆನೇಡ್‌ಗಳಿವೆ.
ಶಂಕಿತ ಉಗ್ರ ತನ್ನನ್ನು ತಾನು ಸ್ಫೋಟಿಸಿಕೊಳ್ಳಲು ತಯಾರಾಗಿದ್ದು, ಉಳಿದ ಉಗ್ರರು ಆತನಿಗಾಗಿ ಗ್ರೆನೇಡ್ ಸಂಗ್ರಹ ಮಾಡುತ್ತಿದ್ದರು. 4-7 ಸೆಕೆಂಡ್‌ನಲ್ಲಿ ಬ್ಲಾಸ್ಟ್ ಆಗುವ ಸಾಮರ್ಥ್ಯವಿರುವ ಗ್ರೆನೇಡ್‌ನ್ನು ಶಂಕಿತ ಉಗ್ರರು ಹೊಂದಿದ್ದಾರೆ. ಹೆಬ್ಬಾಳದ ಡಿಜೆಹಳ್ಳಿ ಬಳಿ ಪೊಲೀಸರು ಶಂಕಿತ ಉಗ್ರರನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಮುಂದುವರಿದಂತೆ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.