ಜಾನ್ಸನ್ ಅಂಡ್ ಜಾನ್ಸನ್‌ ಬೇಬಿ ಪೌಡರ್‌ ಕಂಪನಿಗೆ ಬಿತ್ತು ಭಾರೀ ಪ್ರಮಾಣದ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೀವೂ ನಿಮ್ಮ ಮಕ್ಕಳಿಗೆ ಜಾನ್ಸನ್‌ ಅಂಡ್‌ ಜಾನ್ಸನ್‌ ಬೇಬಿ ಪೌಡರ್‌ ಬಳಕೆ ಮಾಡುತ್ತಿದ್ದೀರಾ? ಹಾಗಾದರೆ, ಒಮ್ಮೆ ಈ ಸ್ಟೋರಿ ಓದಿ. ಸುಮಾರು ವರ್ಷಗಳಿಂದ ಈ ಪೌಡರ್‌ ಬಳಸುತ್ತಿದ್ದ ವ್ಯಕ್ತಿಯೊಬ್ಬರು ಕ್ಯಾನ್ಸರ್‌ಗೆ ತುತ್ತಾಗಿದ್ದು, ಕೋರ್ಟ್‌ ಮೆಟ್ಟಿಲೇರಿದ್ದಾರೆ.  ಓಕ್ಲ್ಯಾಂಡ್‌ನಲ್ಲಿರುವ ಕ್ಯಾಲಿಫೋರ್ನಿಯಾ ರಾಜ್ಯ ನ್ಯಾಯಾಲಯವು ಜಾನ್ಸನ್ ಮತ್ತು ಜಾನ್ಸನ್ ಕಂಪನಿಗೆ ಆಘಾತಕಾರಿ ಹೊಡೆತ ಕೊಟ್ಟಿದೆ.  ಬೇಬಿ ಪೌಡರ್‌ನಿಂದಾಗಿ ಎಮೋರಿ ಹೆರ್ನಾಂಡೆಜ್‌ಗೆ ಕ್ಯಾನ್ಸರ್‌ಗೆ ತುತ್ತಾಗಿದ್ದು, ಅವರಿಗೆ $18.8 ಮಿಲಿಯನ್ ನಷ್ಟವನ್ನು ನೀಡಬೇಕೆಂದು ನ್ಯಾಯಾಲಯ ಆದೇಶ ಜಾರಿ ಮಾಡಿದೆ.

ಎಮೋರಿ ಹೆರ್ನಾಂಡೆಜ್ ವಲಾಡೆಜ್ ಕಳೆದ ವರ್ಷ ಕ್ಯಾಲಿಫೋರ್ನಿಯಾ ರಾಜ್ಯ ನ್ಯಾಯಾಲಯದಲ್ಲಿ ಹಾನಿಯನ್ನು ಕೋರಿ ಮೊಕದ್ದಮೆ ಹೂಡಿದರು. ಬಾಲ್ಯದಿಂದಲೂ ಜಾನ್ಸನ್ ಮತ್ತು ಜಾನ್ಸನ್ ಪೌಡರ್ನ ಅತಿಯಾದ ಬಳಕೆಯು ತನ್ನ ಹೃದಯದ ಸುತ್ತಲಿನ ಅಂಗಾಂಶದಲ್ಲಿ ಮಾರಣಾಂತಿಕ ಕ್ಯಾನ್ಸರ್ ಮೆಸೊಥೆಲಿಯೊಮಾದ ಬೆಳವಣಿಗೆಗೆ ಕಾರಣವಾಯಿತು ಎಂದು ಹೆರ್ನಾಂಡೆಜ್ ಹೇಳಿಕೊಂಡಿದ್ದಾರೆ.

ಹೆರ್ನಾಂಡೆಜ್ ವೈದ್ಯಕೀಯ ಬಿಲ್‌ಗಳು, ವೈದ್ಯರ ಸರ್ಟಿಪೀಕೇಟ್‌ ಮೊದಲಾದವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ತಮ್ಮ ಆರೋಪ ಸತ್ಯವೆಂದು ಸಾಬೀತು ಮಾಡಿದರು. ಅವರ ನೋವು ಮತ್ತು ಸಂಕಟಗಳಿಗೆ ಕಂಪನಿ ಪರಿಹಾರ ನೀಡಬೇಕೆಂದು ತೀರ್ಪುಗಾರರು ತೀರ್ಪು ನೀಡಿದ್ದಾರೆ. ಆದರೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಜಾನ್ಸನ್ ಮತ್ತು ಜಾನ್ಸನ್ ಉಪಾಧ್ಯಕ್ಷ ಎರಿಕ್ ಹಾಸ್ ಸಿದ್ದರಿರುವುದಾಗಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!