ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮ ಜಿಲ್ಲೆ ರಾಜೋಲು ಮಂಡಲ ಶಿವಕೋಡು ಒಎನ್‌ಜಿಸಿ ಪೈಪ್‌ಲೈನ್‌ನಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದು, ಬೆಳಗ್ಗೆಯಿಂದಲೇ ಬೆಂಕಿ ಮುಗಿಲೆತ್ತರಕ್ಕೆ ಉಗುಳುತ್ತಿದೆ.
ಶಿವಕೋಡು ಗ್ರಾಮದ ಮತ್ತಪರ್ರು ರಸ್ತೆಯಲ್ಲಿ ಬೆಂಕಿ ಇನ್ನೂ ಮುಂದುವರಿದಿದ್ದು, 30 ಅಡಿ ಎತ್ತರಕ್ಕೆ ಬೆಂಕಿ ಕೆನ್ನಾಲಿಗೆ ಚಿಮ್ಮುತ್ತಿದೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಒಎನ್‌ಜಿಸಿ ಅಧಿಕಾರಿಗಳು ಎಚ್ಚೆತ್ತು ಬೆಂಕಿ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.
ಇನ್ನೊಂದೆಡೆ ಜಮೀನಿನ ಉದ್ದಕ್ಕೂ ಒಎನ್‌ಜಿಸಿ ಪೈಪ್‌ಲೈನ್ ಹಾಕಲಾಗಿತ್ತು, ಎರಡು ಮೂರು ಬಾರಿ ಜಮೀನಿನಲ್ಲಿ ಗ್ಯಾಸ್ ಸೋರಿಕೆ ಆಗಿದ್ದರಿಂದ ಪರಿಹಾರವನ್ನೂ ನೀಡಿದ್ದೇವೆ ಎನ್ನುತ್ತಾರೆ ಓಎನ್‌ಜಿಸಿ ಅಧಿಕಾರಿಗಳು. ಇನ್ನೊಂದೆಡೆ ನರಸಪುರದಿಂದ ವಿಶೇಷ ತಂಡ ಆಗಮಿಸಲಿದ್ದು, ಕೆಲವೇ ಗಂಟೆಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬರಲಿದೆ ಎಂದು ಒಎನ್‌ಜಿಸಿ ಅಧಿಕಾರಿಗಳು ಹೇಳುತ್ತಿದ್ದಾರೆ.