ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಗಗನಕ್ಕೇರುತ್ತಿದ್ದು, 40 ರಿಂದ 50 ರೂ.ನಷ್ಟಿದ್ದ ಈರುಳ್ಳಿ ಬೆಲೆ ಸಗಟು ಮಾರುಕಟ್ಟೆಯಲ್ಲಿ 70 ರಿಂದ 80 ರೂ.ಗಳಿಗೆ ಏರಿಕೆಯಾಗಿದೆ.
ಈರುಳ್ಳಿ ಬೆಲೆ ಏರಿಕೆ ಕಂಡಿರುವುದು ರೈತರ ಮೊಗದಲ್ಲಿ ಸಂಸತ ತಂದರೆ, ಮತ್ತೊಂದೆಡೆ ಜನರಿಗೆ ಕಣ್ಣೀರು ತರಿಸುವಂತಾಗಿದೆ.
ದೆಹಲಿ ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಲಿ, ಪ್ರತಿ ಕೆಜಿ ಈರುಳ್ಳಿ ಬೆಲೆ ನವೆಂಬರ್‌ನಲ್ಲಿ 80 ರೂ.ಗಳಿಗೆ ತಲುಪಿದ್ದು, ಇದು ಕಳೆದ 5 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದಂತಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಾರಾಟಗಾರರೊಬ್ಬರು, ʻಈರುಳ್ಳಿ ಬೆಲೆ ಪ್ರತಿ ಕೆಜಿಗೆ 60 ರಿಂದ 70, 80 ರೂ.ಗಳಿಗೆ ಏರಿಕೆಯಾಗಿದೆ. ನಾವು ಮಾರಾಟ ಮಾಡಲು ಮಂಡಿಯಿಂದ ಪಡೆಯುತ್ತಿವೆ. ಅಲ್ಲಿ ಪಡೆಯುವ ಬೆಲೆ ಹಾಗೂ ಮಾರಾಟ ಮಾಡುವ ಬೆಲೆಗಳಿಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಬೆಲೆ ಏರಿಕೆಯಾದಂತೆ ಕೊಳ್ಳುವವರ ಸಂಖ್ಯೆ ಇಳಿಕೆಯಾಗುತ್ತಿತ್ತು. ಆದ್ರೆ ಈರುಳ್ಳಿ ಅಗತ್ಯ ವಸ್ತುಗಳಲ್ಲಿ ಒಂದಾಗಿರುವುದರಿಂದ ಜನರು ಖರೀದಿಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ತಿಳಿಸಿದ್ದಾರೆ.