ಹೊಸದಿಗಂತ ವರದಿ,ಯಾದಗಿರಿ:
ಆನ್ ಲೈನ್ ನಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದಾತನನ್ನು ಬಂಧಿಸಿದ ಪೊಲೀಸರು ಆತನಿಂದ ಲಕ್ಷಾಂತರ ರೂ.ಹಣ ವಶಕ್ಕೆ ಪಡೆದ ಘಟನೆ ಮಂಗಳವಾರ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆದಿದೆ.
ನಿಂಗಪ್ಪ ಎಂಬಾತನೇ ಆರೋಪಿಯಾಗಿದ್ದು ಆತನಿಂದ 22.45 ಲಕ್ಷ ರೂ.ವಶ ಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಜಾವೀದ್ ಇನಾಂದಾರ್, ಸಿಪಿಐ ಅನಂದ್ ವಾಘ್ಮೋಡೆ ನೇತೃತ್ವದ ತಂದ ಬಂಧಿಸಿದೆ. ದೇವತ್ಕಲ್ ನ ಬಸ್ ನಿಲ್ದಾಣದ ಹಿಂಬದಿಯಲ್ಲಿ ನಿಂಗಪ್ಪ circ365,DAYS ಬೆಟ್ಟಿಂಗ್ ಆ್ಯಪ್ ಮೂಲಕ ದಂಧೆ ನಡೆಸುತ್ತಿದ್ದ. ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.