ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನಲ್ಲಿ ಮಿಂಚು, ಗುಡುಗು, ಜೋರಾದ ಗಾಳಿ ಸಹಿತ ಮಳೆಯಾಗಿದ್ದು, ಹುಬ್ಬಳ್ಳಿ ಶಿರಸಿ ರಸ್ತೆಯ ಸಾಲಗಾಂವ ಗ್ರಾಮದ ಸನಿಹ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಬಂದಾಗಿದ್ದು ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಹಲವು ಮನೆಗಳ ಮೇಲ್ಚಾವಣೆ ಹಾರಿ ಹೋದ ಹಾನಿಯಾಗಿ ಘಟನೆ ಮಂಗಳವಾರ ಸಾಯಂಕಾಲ ಸಂಭವಿಸಿದೆ.
ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಮೊಡ ಕವಿದ ವಾತಾವರವಿತ್ತು ವಿವಿಧ ಕಡೆಗಳಲ್ಲಿ ಗುಡುಗು ಮಿಂಚು ಜೋರಾದ ಗಾಳಿ ಸಹಿತ ಮಳೆಯಾಗಿತ್ತು. ಮಂಗಳವಾರ ಸಾಯಂಕಾಲದಿಂದ ಆರಂಭವಾದ ಜೋರಾದ ಗಾಳಿಯಿಂದ ಶಿರಸಿ- ಹುಬ್ಬಳ್ಳಿ ರಸ್ತೆಯ ಸಾಲಗಾವ ಗ್ರಾಮದ ಸನಿಹ ದೊಡ್ಡ ಗಾತ್ರದ ಮರವೊಂದು ಬಿದ್ದು ಒಂದು ಘಮಟೆಯಿಂದ ರಸ್ತೆ ಸಂಚಾರ ಬಂದಾಗಿದೆ.
ಪಟ್ಟಣದಲ್ಲಿ ಜೋರಾದ ಗಾಳಿಯಿಂದ ಬಂಕಾಪುರ ರಸ್ತೆಯಲ್ಲಿ ದೀಪಕ್ ಮುಳಗೆಕರ ಅವರ ಮನೆಯ ಮೆಲ್ಚಾವಣೆ ಹಾರಿ ಹೋಗಿದೆ. ಕಿಲ್ಲೆ ಓಣೆಯ ಸುರೇಶ ಜೋಗಿ ಎಂಬುವರ ಮನೆಯ ಮೇಲ್ಚಾವಣೆ ಹಾರಿಹೋಗಿ ಮನೆಯ ಒಳಗೆ ಮಳೆಯ ನೀರು ನುಗ್ಗಿ ಹಾನಿಯಾಗಿದೆ ಇದನ್ನೇಲ್ಲ ಹೊರತು ಪಡಿಸಿ ನೆಹರು ನಗರ ಸುಬಾಷ ನಗರ ಕಬ್ಬಾರಗಟ್ಟಿ ಆನಂದನಗರ ಸೇರಿದಂತೆ ವಿವಿದ ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಮರವೊಂದು ವಿದ್ಯುತ್ ಲೈನ್ ಗಳ ಮೇಲೆ ಬಿದ್ದ ಪರಿಣಾಮ ನೆಹರು ನಗರ ಗಾಂದೊನಗರದಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ.
ಹಳೂರು ಓಣಿಯ ದೇವೇಂದ್ರ ಎನ್ನುವರು ಗೋವಿನ ಜೋಳ ಕಟಾವ ಮಾಡಿ ರಸ್ತೆಯಲ್ಲಿ ಒಣಹಾಕಿದ್ದ ಬೆಳೆ ಗಾಳಿಗೆ ತಾಡಪಲ್ ಹಾರಿ ಮಳೆಯ ನೀರು ಗೋವಿನ ಜೋಳದ ರಾಶಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.