ತರಕಾರಿ ಕೊಳ್ಳೋದಕ್ಕೂ ಆನ್‌ಲೈನ್ ಮೊರೆ ಹೋಗ್ತೀರಾ? ಆನ್‌ಲೈನ್ ಶಾಪಿಂಗ್ ಮುನ್ನ ಇವನ್ನು ಗಮನದಲ್ಲಿಡಿ..

ಈಗೆಲ್ಲಾ ಅಂಗಡಿಗೆ ಹೋಗಿ ವಸ್ತುಗಳನ್ನು ತೆಗೆದುಕೊಂಡು ಬರೋ ಅಭ್ಯಾಸ ಇಲ್ಲವೇ ಇಲ್ಲ. ದೊಡ್ಡ ಸಿಟಿಗಳಲ್ಲಿ ಕೊತ್ತಂಬರಿ ಸೊಪ್ಪು ಕೂಡ ಮನೆ ಬಾಗಿಲಿಗೇ ಬಂದು ಬೀಳುತ್ತದೆ. ಹಾಲು ಮೊಸರಿನಿಂದ ಹಿಡಿದು ಚಿನ್ನದ ಆಭರಣಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡಲಾಗುತ್ತದೆ. ಹೀಗಿರುವಾಗ ಆನ್‌ಲೈನ್ ಶಾಪಿಂಗ್ ಸೇಫ್ ಎಂದು ಹೇಳೋದು ಹೇಗೆ.. ಆನ್‌ಲೈನ್ ಶಾಪಿಂಗ್‌ಗೆ ಮುನ್ನ ಈ ಸೇಫ್ ಟಿಪ್ಸ್ ಅನುಸರಿಸಿ..

ಆಫೀಸ್ ಲ್ಯಾಪ್‌ಟಾಪ್ ಅಥವಾ ಯಾರದ್ದೋ ಲ್ಯಾಪ್‌ಟಾಪ್‌ಗಳಿಂದ ಆರ್ಡರ್ ಮಾಡಬೇಡಿ. ಸೆಕ್ಯೂರ್ ನೆಟ್‌ವರ್ಕ್ ಬಗ್ಗೆ ಗಮನ ಇರಲಿ.

ಯಾವ ಆಪ್‌ನಲ್ಲಿ ಖರೀದಿ ಮಾಡುತ್ತಿದ್ದೀರಿ, ಈ ಆಪ್ ಹೇಗಿದೆ? ಅದರ ಬಗ್ಗೆ ಸ್ವಲ್ಪ ರಿಸರ್ಚ್ ಮಾಡಿ.

ತೀರಾ ಒಳ್ಳೊಳ್ಳೆ ಆಫರ‍್ಸ್ ಇದೆ ಎಂದರೆ ನಂಬುವ ಮುನ್ನ ಆಲೋಚಿಸಿ, ಅಷ್ಟು ಚೀಪ್ ಆದ ಹಣದಲ್ಲಿ ಒಳ್ಳೆಯ ಪ್ರಾಡಕ್ಟ್ ಸಿಗುತ್ತದೆ ಎಂದರೆ ಅದರ ಹಿಂದೆ ಯಾವ ಜಾಲವಾದರೂ ಇರಬಹುದು.

ಗಿಫ್ಟ್ ಕಾರ್ಡ್‌ಗಳನ್ನು ಖರೀದಿ ಮಾಡುತ್ತಿದ್ದರೆ, ಟರ್ಮ್ಸ್ ಹಾಗೂ ಕಂಡೀಷನ್ಸ್‌ಗಳನ್ನು ಮೊದಲು ಓದಿ.

ಯಾವುದೇ ಆಪ್ ಆಗಲಿ, ನೀವು ಕೊಳ್ಳುವ ಅಥವಾ ರಿಟರ್ನ್ ಮಾಡುವ ವಿಷಯ ಬಿಟ್ಟು ಅನಾವಶ್ಯಕ ಮಾಹಿತಿ ಕೇಳಿದರೆ, ಅದನ್ನು ನಂಬಬೇಡಿ.

ಒಂದೇ ರೀತಿಯ ಈಸಿಯಾದ ಪಾಸ್‌ವರ್ಡ್ ಇಡಬೇಡಿ , ಹ್ಯಾಕರ‍್ಸ್‌ಗಳಿಗೆ ಇದು ಸುಲಭ.

ರಿಟರ್ನ್ ಪಾಲಿಸಿಗಳನ್ನು ಗಮನಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತಿನಿಂದ ನೇರ ಆರ್ಡರ್ ಮಾಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!