ಹೆಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ 28 ದಿನ ಮಾತ್ರ ಬಾಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಎಲ್ಲಾ ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ನೀಡಲು ರಾಜ್ಯ ಸರ್ಕಾರ ಈ ಹಿಂದೆ ಅಧಿಸೂಚನೆ ಹೊರಡಿಸಿತ್ತು. ಹೆಚ್‌ಎಸ್‌ಆರ್‌ಪಿ ಪರವಾನಗಿ ಫಲಕಕ್ಕೆ ಅರ್ಜಿ ಸಲ್ಲಿಸಲು ಫೆ.17 ಕೊನೆಯ ದಿನವಾಗಿದೆ. ಇಲ್ಲದಿದ್ದರೆ ಪ್ರತಿ ಬಾರಿ ಪೊಲೀಸರ ಬಳಿ ಸಿಕ್ಕಿಬಿದ್ದರೆ 500-1000 ರೂಪಾಯಿ ದಂಡ ಕಟ್ಟಬೇಕಿತ್ತು. ಆದರೆ ಸರ್ಕಾರ ಈ ಗಡುವನ್ನು ಫೆಬ್ರವರಿ 17 ರವರೆಗೆ ವಿಸ್ತರಿಸಿದೆ. ಆದಾಗ್ಯೂ, ಇದಕ್ಕೆ ಇನ್ನಿರುವುದು ಕೇವಲ ಒಂದು ತಿಂಗಳು ಬಾಕಿ ಅಷ್ಟೇ.

ರಾಜ್ಯದಲ್ಲಿ ಹಳೆಯ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಲಭ್ಯವಾಗಲು ನವೆಂಬರ್ 17 ಕೊನೆಯ ದಿನವಾಗಿತ್ತು. ಆದಾಗ್ಯೂ, ನಾವು ಪ್ರಸ್ತುತ ಈ ಅವಧಿಯನ್ನು ವಿಸ್ತರಿಸಲು ಪರಿಗಣಿಸುತ್ತಿದ್ದೇವೆ. ನವೆಂಬರ್ 17ರ ಬದಲು ಫೆಬ್ರವರಿ 17ಕ್ಕೆ ಗಡುವು ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದರು. ಹಾಗಾಗಿ ನಿಮಗೆ ಕೇವಲ ಒಂದು ತಿಂಗಳು ಮಾತ್ರ ಇದೆ ಎಂಬುದನ್ನು ಮರೆಯಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!