ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ ಬಾಸ್ ಸೀಸನ್ 11 97 ದಿನಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಈಗ ಗ್ರ್ಯಾಂಡ್ ಫಿನಾಲೆಗೆ ರೆಡಿಯಾಗುತ್ತಿದೆ. ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನು 3 ವಾರಗಳಷ್ಟೇ ಬಾಕಿ ಉಳಿದಿದೆ. ಮುಂದಿನ 3 ವಾರಗಳು ಬಿಗ್ ಬಾಸ್ 11ರ 9 ಸ್ಪರ್ಧಿಗಳಿಗೆ ಬಹಳ ಮುಖ್ಯವಾಗಿದೆ.
ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನು 3 ವಾರಗಳಷ್ಟೇ ಉಳಿದಿರೋದು. ಈ ಮಾತನ್ನ ಖುದ್ದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ವಾರದ ಕತೆ ಕಿಚ್ಚನ ಜೊತೆಯಲ್ಲಿ ಕೊನೆಯದಾಗಿ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಸುದೀಪ್ ಅವರು 3 ವಾರದ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಬಿಗ್ ಬಾಸ್ ಮನೆಗೆ ಈ ಬಾರಿ 17 ಸ್ಪರ್ಧಿಗಳು ಗ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಅದರಲ್ಲಿ ಸ್ವರ್ಗಕ್ಕೆ ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ತ್ರಿವಿಕ್ರಮ್, ಹಂಸ, ಗೌತಮಿ, ಧರ್ಮ ಕೀರ್ತಿ ರಾಜ್, ವಕೀಲ ಜಗದೀಶ್, ಐಶ್ವರ್ಯ ಶಿಂದೋಗಿ, ಮತ್ತು ಉಗ್ರಂ ಮಂಜು ಆಗಮಿಸಿದ್ದರು.
ಇನ್ನು, ನರಕಕ್ಕೆ ಶಿಶಿರ್ ಶಾಸ್ತ್ರಿ, ಅನುಷಾ ರೈ, ಮಾನಸಾ ತುಕಾಲಿ ಸಂತೋಷ್, ರಂಜಿತ್ ಕುಮಾರ್, ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಮತ್ತು ಮೋಕ್ಷಿತಾ ಪೈ ಬಂದಿದ್ದರು. ಇದಾದ ಮೇಲೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಹನುಮಂತ, ರಜತ್ ಹಾಗೂ ಶೋಭಾ ಎಂಟ್ರಿ ಕೊಟ್ಟಿದ್ದರು.
ಕಳೆದ 14 ವಾರಗಳಲ್ಲಿ 20 ಸ್ಪರ್ಧಿಗಳಲ್ಲಿ 11 ಮಂದಿ ಎಲಿಮಿನೇಟ್ ಆಗಿ ಹೋಗಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದರೋದು 9 ಸ್ಪರ್ಧಿಗಳು ಮಾತ್ರ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್ ಅವರು 9 ಸ್ಪರ್ಧಿಗಳನ್ನ ಅಕ್ಷರಶಃ ಎಚ್ಚರಿಸಿದ್ದಾರೆ. ಬಹಳ ಸೂಕ್ಷ್ಮವಾಗಿ ಮಾತನಾಡಿದ ಕಿಚ್ಚ ಸುದೀಪ್ ಇನ್ನು 3 ವಾರಗಳ ಕಾಲ ನಿಮ್ಮ ಲೈಫ್‌ನಲ್ಲಿ ಬಿಗ್ ಬಾಸ್ ಉಳಿದಿರೋದು. ನಿಮ್ಮ ಲೈಫ್‌ನಲ್ಲಿ ಇನ್ನು 3 ವಾರಗಳ ಕಾಲ ಮಾತ್ರ ಉಳಿದಿರೋದು ಒತ್ತಿ, ಒತ್ತಿ ಹೇಳಿದ್ದಾರೆ.
ನಿಮ್ಮ ಕನಸಿಗೆ ಹತ್ತಿರವಾಗಲು, ಯಾರೋ ಇಲ್ಲಿ ಮನೆ ಕಟ್ಟಬೇಕು ಅಂತ ಇದ್ದೀರಿ, ನಿಮ್ಮ ಕೆರಿಯರ್ ಕಟ್ಟಬೇಕು ಅಂತ ಇದ್ದೀರಿ, ಯಾರಿಗೋ ಉಪಕಾರ ಮಾಡಬೇಕು. ನಿಮ್ಮ ತಾಯಿಗೆ ಬೆಂಬಲವಾಗಿ ಇರ್ಬೇಕು ಅಂತ ಇದ್ದೀರಿ ಅದಕ್ಕೆ ಉಳಿದಿರೋದು 3 ವಾರಗಳು ಅಷ್ಟೇ ಎಂದು ಸುದೀಪ್ ಹೇಳಿದ್ದಾರೆ.
ಇಲ್ಲಿಂದ ಮುಂದೆ ಹೋಗೋದು ಒಂದು ಆದ್ರೆ ಯಾವ ರೀತಿ ಮುಂದೆ ಹೋಗುತ್ತೀರಿ ಅನ್ನೋದು 2ನೇಯದು ಆಗುತ್ತೆ. ಬಿಗ್ ಬಾಸ್ ಟ್ರೋಫಿಯನ್ನ 2 ರೀತಿ ಗೆಲ್ಲಬಹುದು ಅರ್ಥ ಮಾಡಿಕೊಳ್ಳಿ. 1. ಕಷ್ಟ ಪಟ್ಟು ಬೆವರು ಸುರಿಸಿ ಒದ್ದಾಡಿ ಗೆಲ್ಲಬಹುದು. 2. ಕಷ್ಟ ಪಟ್ಟು ಎಲ್ಲದರ ಒಟ್ಟಿಗೆ ಸ್ವಾಭಿಮಾನದಲ್ಲಿ ಗೆಲ್ಲೋದು. ಸ್ವಾಭಿಮಾನದಲ್ಲಿ ಗೆಲ್ಲೋದು ನನ್ನ ಜೀವನದಲ್ಲಿ ನನಗೆ ಬಹಳ ಮುಖ್ಯ. ನಿಮಗೆ ಯಾವುದು ಬೇಕೋ ನೀವು ಆಯ್ಕೆ ಮಾಡಿಕೊಳ್ಳಿ ಎಂದು ಬಿಗ್ ಬಾಸ್ ಮನೆಯಲ್ಲಿ ಉಳಿದಿರುವ ಮೋಕ್ಷಿತಾ, ಗೌತಮಿ, ಭವ್ಯಾ, ಚೈತ್ರಾ, ಮಂಜು, ತ್ರಿವಿಕ್ರಮ್, ಧನರಾಜ್, ಹನುಮಂತ, ರಜತ್‌ಗೆ ಸುದೀಪ್ ಅವರು ಫಿನಾಲೆಗೆ ಸಜ್ಜಾಗಿ ಎಂದು ಹೇಳಿದ್ದಾರೆ.