ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಫರ್ಧಿಸಲು ಇನ್ನುಮುಂದೆ 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಅವಕಾಶ ನೀಡುವುದಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳ ವಿಚಾರ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಮೊನ್ನೆಯಷ್ಟೇ ಮಧ್ಯಪ್ರದೇಶದ ನಿಗಮವೊಂದು ನಾಲ್ಕು ಮಕ್ಕಳನ್ನು ಹೆತ್ತರೇ 1 ಲಕ್ಷ ನಗದು ಬಹುಮಾನ ಘೋಷಿಸಿತ್ತು. ಈ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಈ ಹೇಳಿಕೆ ನೀಡಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿಲ್ಲದವರು ಸರಪಂಚ್ ಆಗಲು ಸಾಧ್ಯವಿಲ್ಲ. ಪುರಸಭೆ ಕೌನ್ಸಿಲರ್, ಪಾಲಿಕೆ ಮೇಯರ್ ಆಗಲು ಸಾಧ್ಯವಿಲ್ಲ ಎಂದು ನಾಯ್ಡು ಹೇಳಿದ್ದಾರೆ.
ಹಳೆ ತಲೆಮಾರಿನವರು ಹೆಚ್ಚೆಚ್ಚು ಮಕ್ಕಳನ್ನು ಹೊಂದಿರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಒಂದು ಮಗುವನ್ನು ಮಾತ್ರ ಪಡೆಯುತ್ತಿದ್ದೀರಿ. ನಿಮ್ಮ ಪೋಷಕರು ನಿಮ್ಮಂತೆಯೇ ಯೋಚಿಸಿದ್ದರೆ ಈ ಜಗತ್ತಿಗೆ ನೀವು ಬರುತ್ತಿರಲಿಲ್ಲ. ಹೀಗೆ ಮಾಡದೇ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಬಗ್ಗೆ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ನವದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದುವಂತೆ ಮಾಡಲು ಹೊಸ ಪ್ರೋತ್ಸಾಹಕ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಆಳುವವರು/ಕೇಳುವವರ.ಅಂದರೆ ಕರೆ ಕೊಡುವವರು ಮೊದಲು ಈ ಸೂತ್ರ ಪಾಲಿಸಿದ್ದರೆ ಮಾತ್ರ ಇತರರಿಗೆ ಕರೆ ಕೊಡುವ ಯೋಗ್ಯತೆ ಹೊಂದಿದಂತೆ.ಈ ಸೂತ್ರ ಎಲ್ಲಾ ದೃಷ್ಟಿಯಲ್ಲಿ ಸಹ ಸಮಂಜಸವೇ.
ಆದರೆ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಮಾತ್ರ ಶರ್ತಗಳಿರಕೂಡದು.
ಏಕರೂಪ ನಾಗರಿಕ ಸಂಹಿತೆ ಬರಲಿ. ಎಷ್ಟೇ ಸಿರಿವಂತನಾದರೂ ಕಾನೂನಿನ ದೃಷ್ಟಿಯಲ್ಲಿ ಸಮಾನತೆ.