ಸೈಫ್ ಅಲಿಖಾನ್​ ಮೇಲೆ ಚಾಕು ಇರಿತ: ಕೊನೆಗೂ ಆರೋಪಿಯ ಸುಳಿವು ಪತ್ತೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಸೈಫ್ ಅಲಿ ಖಾನ್​ ಅವರ ಮನೆಗೆ ನುಗ್ಗಿ, ಚಾಕು ಇರಿದ ಪ್ರಕರಣದಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳನ್ನು ಮುಂಬೈ ಪೊಲೀಸರು ಗುರುತಿಸಿದ್ದಾರೆ. ಆ ಪೈಕಿ ಓರ್ವ ಶಂಕಿತನ ಫೋಟೋ ಕೂಡ ಲಭ್ಯವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಸೈಫ್ ಕುಟುಂಬ ವಾಸವಾಗಿರುವ ಅಪಾರ್ಟ್​ಮೆಂಟ್​ನ ಮೆಟ್ಟಿಲುಗಳನ್ನು ಹತ್ತಿ ಬರುವಾಗ ಸಿಸಿಟಿವಿಯಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ.

ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದ ವ್ಯಕ್ತಿಯ ಫೋಟೋವನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ. ಗುರುವಾರ ನಸುಕಿನ 2.33 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಅಪಾರ್ಟ್​ಮೆಂಟ್​ಗೆ ನುಗ್ಗಿದ್ದರು. ಶಂಕಿತ ವ್ಯಕ್ತಿಯು ಟಿ-ಶರ್ಟ್​ ಮತ್ತು ಜೀನ್ಸ್ ಧರಿಸಿದ್ದಾನೆ. ಆತ ಯಾರು? ಆತನ ಉದ್ದೇಶ ಏನಾಗಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಏನೂ ದೊಡ್ಡ ಹಗರಣದ ಸೂಚನೆಗಳಿಲ್ಲ.ಯಾರೋ ಓರ್ವ ಯುವತಿ ಸೈಫ್ ಮನೆಯ ಉದ್ಯೋಗಿ ಇದ್ದಾಳೆ.ಆಕೆಯ ಮಾಜಿ ಪ್ರೇಮಿ ಈ ಕೃತ್ಯ ಎಸಗಿದ್ದಾನೆ.ಭಗ್ನ ಪ್ರೇಮಿಯ ಸೇಡಿನ ಕೃತ್ಯ. ಆಕೆಗೆ ಹಲವು ಕೋನಗಳಿಂದ ಜೀವನ ಭಧ್ರತೆ ಖಚಿತವಾಗಿರುವ ಅನ್ಯ ಆಯ್ಕೆ ಲಭ್ಯವಾಗಿದೆ.

LEAVE A REPLY

Please enter your comment!
Please enter your name here

error: Content is protected !!