ಮತದಾನದಕ್ಕೆ ಮೂರೇ ದಿನ ಬಾಕಿ, ಹೇಗಿದೆ ಬೆಂಗಳೂರಿನಲ್ಲಿ ತಯಾರಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನೂ ಲೋಕಸಭಾ ಚುನಾವಣೆಗೆ ಮೂರು ದಿನವಷ್ಟೇ ಬಾಕಿ ಇದ್ದು ಬೆಂಗಳೂರಿನಲ್ಲಿ ಅಂತಿಮ ಹಂತದ ಸಿದ್ಧತೆ ಹೇಗಿದೆ?

ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹಾಗೂ ಪೊಲೀಸ್ ಆಯುಕ್ತ ದಯಾನಂದ್ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ.

ಹೇಗಿದೆ ಬಂದೋಬಸ್ತ್‌?

ಬೆಂಗಳೂರು ನಗರ ಪೊಲೀಸ್ ಘಟಕದಿಂದ 9397 ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 3,919 ಗೃಹ ರಕ್ಷಕ ಸಿಬ್ಬಂದಿ, 54 ಸಶಸ್ತ್ರ ತುಕಡಿ ಹಾಗೂ 11 ಕೇಂದ್ರಿಯ ಪೊಲೀಸ್ ತುಕಡಿ ಇರಲಿದೆ.

ಮೂರು ದಿನ ನಿಗಾ
ಇಂದಿನಿಂದ ಮತದಾನಕ್ಕೆ ಮೂರು ದಿನ ಇದೆ. ಮತದಾನ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಕ್ಲೋಸ್ ಆಗಲಿದೆ. ಈ ಸಮಯದಲ್ಲಿ ಹಣ ಹಂಚಿಕೆ ಆಗಲಿ, ಆಮಿಷ ಮಾಡೋದು ನಡೆಯಬಾರದು. ಮತದಾರರ ಮೇಲೆ ಪ್ರಭಾವ ಬೀರುವ ಚಟುವಟಿಕೆ ಮೇಲೆ ನಿಗಾ ವಹಿಸಲಾಗಿದೆ.

2003 ಕ್ರಿಟಿಕಲ್ ಮತಗಟ್ಟೆಗಳು

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 8,984 ಮತಗಟ್ಟೆಗಳಿವೆ. ಇದರಲ್ಲಿ 2003 ಕ್ರಿಟಿಕಲ್ ಮತಗಟ್ಟೆ ಗಳು, 253 ವಲ್ನರಬಲ್ ಮತಗಟ್ಟೆಗಳು, 30 ಎಕ್ಸ್ ಪೆಂಡೀಚರ್ ಸೆನ್ಸಿಟಿವ್ ಮತಗಟ್ಟೆಗಳು, 305 ಮೈಕ್ರೋ ಅಬ್ಸವರ್ಸರ್‍ಗಳಿವೆ. ಸೂಕ್ಷ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 11794 ಸಿಎಪಿಎಫ್ ಮತ್ತು ನಾನ್ ಸಿಎಪಿಎಫ್ ತಂಡಗಳ ನಿಯೋಜನೆ ಮಾಡಲಾಗುತ್ತದೆ. 103 ಚೆಕ್ ಪೋಸ್ಟ್ ಗಳು, 91 ಪ್ಲೇಯಿಂಗ್ ಸ್ಕ್ವಾಡ್ ಗಳು ಇರಲಿವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!