ಊಟಿಯನ್ನೂ ಬಿಡದೆ ಕಾಡುತ್ತಿದೆ ಬಿಸಿಲ ಬೇಗೆ: ಗಿರಿಧಾಮವಾದಲ್ಲಿ ದಾಖಲೆಯ ತಾಪಮಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಿಸಿಲಿನ ಪ್ರತಾಪಕ್ಕೆ ಜನ ಹೈರಾಣಾಗಿದ್ದಾರೆ. ಈ ಬಾರಿಯ ಬಿಸಿಲು ಪ್ರಸಿದ್ಧ ಗಿರಿಧಾಮವಾದ ಊಟಿಯನ್ನು ಬಿಡಲಿಲ್ಲ .ಸದಾ ಬೇಸಿಗೆಯಲ್ಲೂ ತಂಪಾಗಿರುವ ತಮಿಳುನಾಡಿನ ಈ ಗಿರಿಧಾಮ ಈ ಬಾರಿ ಬಿಸಿಲಿಗೆ ತತ್ತರಿಸಿದೆ.

ಊಟಿ ಎಂದೇ ಖ್ಯಾತಿ ಪಡೆದಿರುವ ಉದಕಮಂಡಲದಲ್ಲಿ ಏಪ್ರಿಲ್​ 29ರಂದು ಅತಿ ಹೆಚ್ಚು ತಾಪಮಾನ 29 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಇದು ಇಲ್ಲಿನ ಸಾಮಾನ್ಯ ತಾಪಮಾನಕ್ಕಿಂತ 5.4 ಡಿಗ್ರಿಯಷ್ಟು ಹೆಚ್ಚಳ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್​ಎಂಸಿ) ಹೆಚ್ಚುವರಿ ಪ್ರಧಾನ ನಿರ್ದೇಶಕರಾಗಿರುವ ಎಸ್​ ಬಾಲಚಂದ್ರನ್​ ತಿಳಿಸಿದ್ದಾರೆ.

1986ರಲ್ಲಿ ಊಟಿಯಲ್ಲಿ ಅತಿ ಹೆಚ್ಚು ತಾಪಮಾನ ಅಂದರೆ 28.5 ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು. ಇದೀಗ ಈ ದಾಖಲೆ ಮುರಿದು 29 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ.

ತಮಿಳುನಾಡಿನ ಉತ್ತರ ಒಳನಾಡಿನಲ್ಲಿ ಈಗಾಗಲೇ ಶಾಖದ ಅಲೆ ಪರಿಸ್ಥಿತಿ ಕುರಿತು ಆರ್​ಎಂಸಿ ಎಚ್ಚರಿಕೆ ನೀಡಿದ್ದು, ಮೇ 3ರ ವರೆಗೆ ಬಿಸಿಲಿನ ತಾಪ ಹೆಚ್ಚಿದ್ದು, ಯೆಲ್ಲೋ ಆಲರ್ಟ್​ ಘೋಷಿಸಲಾಗಿದೆ.

ತಮಿಳುನಾಡಿನ ಈರೋಡ್​ನಲ್ಲಿ ಅತಿ ಹೆಚ್ಚು ತಾಪಮಾನ 42 ಡಿಗ್ರಿ ದಾಖಲಾಗಿದ್ದು, ಚೆನ್ನೈನಲ್ಲಿ 38.6 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ. ಇನ್ನು ಕನ್ಯಾಕುಮಾರಿ ಮತ್ತು ತಿರುನೆಲ್ವೆಲಿಯಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ತಿಳಿಸಿದೆ.

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಪ್ರವಾಸಿಗರು ಊಟಿಯಂತಹ ತಂಪಾದ ಪ್ರದೇಶಗಳತ್ತ ಮುಖ ಮಾಡುತ್ತಾರೆ. ಆದರೆ ಈ ಬಾರಿ ಈ ಗಿರಿಧಾಮ ಕೂಡ ಬಿಸಿಲ ತಾಪಮಾನಕ್ಕೆ ತತ್ತರಿಸಿದ್ದು, ಯಾವುದೇ ತಂಪು ಅನುಭವ ಉಂಟಾಗುತ್ತಿಲ್ಲ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!