ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ, ಇಂದು ಗರ್ಭಗುಡಿ ಬಾಗಿಲು ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷಕ್ಕೊಮ್ಮೆ ದರುಶನ ನೀಡುವ ಹಾಸನಾಂಬೆ ದೇವಿಯ ದರುಶನಕ್ಕೆ ಇಂದು ಕಡೆಯ ದಿನವಾಗಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ದೇವಿ ದೇಗುಲದ ಬಾಗಿಲು ಮುಚ್ಚಲಾಗುತ್ತದೆ.

ಇಂದು ಮುಂಜಾನೆಯಿಂದಲೇ ದೇವಿಯ ದರುಶನಕ್ಕೆ ಜನರು ಸರತಿ ಸಾಲಿನಲ್ಲಿ ನಿಂತಿದ್ದು, ಇಂದು ದೇಗುಲದ ಬಾಗಿಲು ಮುಚ್ಚಿದರೆ ಒಂದು ವರ್ಷದ ನಂತರವಷ್ಟೇ ಬಾಗಿಲು ತೆರೆಯಲಿದೆ.

ನವೆಂಬರ್ 2 ರಿಂದ 13 ದಿನಗಳು ಸಾರ್ವಜನಿಕರ ದರುಶನಕ್ಕೆ ಅವಕಾಶ ನೀಡಲಾಗಿತ್ತು. ಇಂದು ಮಧ್ಯಾಹ್ನ ವಿಶ್ವರೂಪ ದರುಶನದ ನಂತರ ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳ ನಂತರ ಬಾಗಿಲು ಮುಚ್ಚಲಾಗುತ್ತದೆ.

ಈವರೆಗೂ ಒಟ್ಟಾರೆ 13 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರುಶನ ಪಡೆದಿದ್ದು, ದೇವಸ್ಥಾನಕ್ಕೆ ಐದು ಕೋಟಿ ರೂಪಾಯಿಗೂ ಹೆಚ್ಚು ಕಾಣಿಕೆ ಹರಿದುಬಂದಿದೆ. ಇಂದು ಹಲವು ಗಣ್ಯರು ದೇವಿಯ ದರುಶನ ಪಡೆದಿದ್ದು, ಬೆಳಗ್ಗೆ 7:45 ಕ್ಕೆ ತಾಯಿ ದರುಶನ ಆರಂಭವಾಗಿದೆ.

ಇಂದು ಬಾಗಿಲು ಮುಚ್ಚುವಾಗ ಹಚ್ಚಿದ ದೀಪ, ಇಟ್ಟ ಪ್ರಸಾದ ವರ್ಷದ ನಂತರವೂ ಹಾಗೆಯೇ ಇರುತ್ತದೆ ಎನ್ನುವುದು ಈ ದೇಗುಲದ ಪ್ರತೀತಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!