Wednesday, November 29, 2023

Latest Posts

ಮತದಾರರ ಗುರುತಿನ ಚೀಟಿ ಹಗರಣದ ಮುಕ್ತ ತನಿಖೆ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮತದಾರರ ಗುರುತಿನ ಚೀಟಿ ಹಗರಣದ ತನಿಖೆ ಸರ್ಕಾರ ಮುಕ್ತವಾಗಿ ಮಾಡಿಸುತ್ತದೆ. ಯಾವುದಾದರೂ ಸಂಸ್ಥೆ, ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ಆರೋಪ ಬಂದರೆ ತನಿಖೆ ಮಾಡಬೇಕೆಂದೇ ನಾವು ಆದೇಶ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ ಹಲವರ ವಿರುದ್ಧ ಕ್ರಮ ಕೈಗೊಂಡಿದ್ದು, ಹಲವರನ್ನು ಬಂಧಿಸಿದ್ದೇವೆ. ಇನ್ನೂ ಹಲವು ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಾಗುವುದು ಎಂದರು.

ಚುನಾವಣಾ ಆಯೋಗ ಮತ್ತೊಮ್ಮೆ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಮಾಡಬೇಕೆಂದು ತೀರ್ಮಾನಿಸಿದ್ದಾರೆ, ಅದು ಸ್ವಾಗತಾರ್ಹ. ಸಂಪೂರ್ಣವಾಗಿ ಮುಕ್ತವಾಗಿ, ನ್ಯಾಯಸಮ್ಮತವಾಗಿ ಚುನಾವಣೆ ನಡೆಯಬೇಕು. ಮತದಾರರ ಹೆಸರು ಅನ್ಯಾಯವಾಗಿ ಪಟ್ಟಿಯಿಂದ ರದ್ದಾಗಿದ್ದರೆ ಮತ್ತೆ ಹಾಕಿ ಸರಿಪಡಿಸುವುದು, ಇನ್ನೊಂದು ಎರಡು-ಮೂರು ಕಡೆ ಮತದಾರರ ಹೆಸರುಗಳಿದ್ದರೆ ಒಂದು ಕಡೆ ಮಾತ್ರ ಇಟ್ಟುಕೊಳ್ಳಬೇಕು. ಎರಡೂ ಕಾರ್ಯಗಳು ಆಗಬೇಕೆಂಬ ಉದ್ದೇಶ ಚುನಾವಣಾ ಆಯೋಗಕ್ಕೆ ಮತ್ತು ಸರ್ಕಾರಕ್ಕಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!