ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆತೆರೆ: ಸ್ವೀಕರ್ ಯುಟಿ ಖಾದರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ (belagavi Winter session 2023) ಇಂದು ತೆರೆ ಬಿದ್ದಿದೆ. ಅಧೀವೇಶನದ ಕೊನೆ ದಿನವಾದ ಇಂದು(ಡಿಸೆಂಬರ್ 15) ಸ್ವೀಕರ್ ಯುಟಿ ಖಾದರ್​ (Speaker UT Khader) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಭಾರಿ ದೀರ್ಘಾವದಿ ಚರ್ಚೆಯಾಗಿದ್ದು, 17 ಬಿಲ್‌ ಗಳನ್ನ ಅಂಗೀಕರಿಸಲಾಗಿದೆ. ಇನ್ನು 150 ಗಮನ ಸೆಳೆಯುವ ಸೂಚನೆಗೆ ಚರ್ಚೆಯಾಗಿದ್ದು, ಅಧಿವೇಶನ ಅತ್ಯಂತ ಸಂತೋಷ‌ ತಂದಿದೆ ಎಂದಿದ್ದಾರೆ.

ಅಧಿವೇಶನ ಡಿಸೆಂಬರ್ 4 ರಿಂದ ಆರಂಭವಾಗಿದ್ದು ಈವರೆಗೆ ಉಪಯುಕ್ತ ಚರ್ಚೆಗಿಂತ ಗದ್ದಲ ಕೋಲಾಹಲದಲ್ಲೇ ಸದನ ಮುಳುಗಿಹೋಗಿದೆ. ಚರ್ಚೆಯಾಗಬೇಕಾದ ಸಾಕಷ್ಟು ವಿಚಾರಗಳು ಹಾಗೇ ಉಳಿದುಕೊಂಡಿವೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಹನ್ನೊಂದು ಗಂಟೆ ಹನ್ನೊಂದು ನಿಮಿಷಗಳ ಕಾಲ ಚರ್ಚೆಯಾಗಿದೆ. ಸಿಎಂ ಅದಕ್ಕೆ ಉತ್ತರವನ್ನೂ ಸಹ ಕೊಟ್ಟಿದ್ದಾರೆ, ಇನ್ನು ಪ್ರಮುಖವಾಗಿ ಎರಡು ದಿನ ಬರಗಾಲದ‌ ಮೇಲೆ ಚರ್ಚೆಯಾಗಿದ್ದು, ಇದಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ತರ ಕೊಟ್ಟಿದ್ದಾರೆ ಎಂದು ವಿವರಿಸಿದರು.

ಶಾಸಕರು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದಿತ್ತು. ಈ ಭಾರಿ ಅದನ್ನ ತಪ್ಪಿಸಿದ್ದೇವೆ. ಧರಣಿ, ಪ್ರತಿಭಟನೆ ಪ್ರಜಾಪ್ರಭುತ್ವದ ಸೌಂದರ್ಯ. ಪತ್ರಕರ್ತರು ಹಲವು‌ ಸಲಹೆಗಳನ್ನು ಕೊಟ್ಟಿದ್ದರು. ಸಲಹೆಯಂತೆಯೇ ನಾವು ನಡೆದುಕೊಂಡಿದ್ದೇವೆ. ಎಲ್ಲರಿಗೆ ನಾವು ಋಣಿಯಾಗಿದ್ದೇವೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳು‌ ಆಗಿವೆ ಎಂದು ಹೇಳಿದರು.

ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದ್ದೇವೆ. ಪರಿಸರ ಪ್ರೇಮಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ಶಾಸಕರು ಇದರಲ್ಲಿ ಪಾಲ್ಗೊಂಡಿದ್ದರು. ಹಿಂದೆ ಕಲಾಪ ನೋಡಲು ವಿದ್ಯಾರ್ಥಿಗಳು ಕಾಯಬೇಕಿತ್ತು. ಈ ಬಾರಿ ಅವರಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಸ್ವರ್ಣ ಸಂಭ್ರಮ ಕಾರ್ಯಕ್ರಮವನ್ನೂ ಸಹ ನಡೆಸಿದ್ದೇವೆ. ಅಲ್ಲದೇ ಸದನದ ಸದಸ್ಯರನ್ನ‌ ಗೌರವಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!