ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್-ಹಮಾಸ್ ಯುದ್ಧದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರಕಾರ ಆಪರೇಷನ್ ಅಜಯ್ (Operation Ajay) ಅನ್ನು ಪ್ರಾರಂಭಿಸಿದ್ದು, ಇದರ ಭಾಗವಾಗಿ ಭಾರತೀಯರನ್ನು ಹೊತ್ತ ಮೊದಲ ವಿಮಾನ ಇಂದು ರಾತ್ರಿ ಟೆಲ್ ಅವಿವ್ನ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟೆಲ್ ಅವಿವ್ನಿಂದ ದೆಹಲಿಗೆ ಚಾರ್ಟರ್ಡ್ ಫ್ಲೈಟ್ ಅನ್ನು ಕಳುಹಿಸಿರುವುದಾಗಿ ವಿದ್ಯಾರ್ಥಿಗಳಿಗೆ ಮೇಲ್ ಸಂದೇಶ ಕಳುಹಿಸಿದೆ. ಈ ವಿಮಾನ ಇಂದು ಇಸ್ರೇಲ್ (Israel) ಕಾಲಮಾನ ರಾತ್ರಿ ಸುಮಾರು 9 ಗಂಟೆಗೆ ಬೆನ್ ಗುರಿಯಾನ್ ನಿಲ್ದಾಣದಿಂದ ಟೇಕ್ ಆಫ್ ಆಗಲಿದೆ.
ಭಾರತೀಯ ವಿದ್ಯಾರ್ಥಿಗಳಿಗೆ ಮೇಲ್ನಲ್ಲಿ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಲು ಕೇಳಲಾಗಿದೆ. ನಂತರ ಅವರು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತಾರೆ. ಒಂದು ಚೆಕ್ ಇನ್ ಲಗೇಜ್ 23 ಕೆ.ಜಿ ಗಿಂತ ಹೆಚ್ಚಿರಬಾರದು ಮತ್ತು ಒಂದು ಕ್ಯಾಬಿನ್ ಲಗೇಜ್ ಅನ್ನು ಅನುಮತಿಸಲಾಗುವುದು ಎಂದು ಮೇಲ್ನಲ್ಲಿ ತಿಳಿಸಲಾಗಿದೆ.