‘ಆಪರೇಷನ್‌ ಅಜಯ್‌’: ನಾಳೆ ದೆಹಲಿಗೆ ಬರಲಿದೆ ಎರಡನೇ ವಿಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್‌ನಿಂದ ‘ಆಪರೇಷನ್‌ ಅಜಯ್‌’ ಮೂಲಕ ಈಗಾಗಲೇ ಮೊದಲ ವಿಮಾನ ಭಾರತಕ್ಕೆ ಆಗಮಿಸಿದ್ದು, ಇದೀಗ ಮತ್ತಷ್ಟು ಭಾರತೀಯರನ್ನು ಶುಕ್ರವಾರ ಎರಡನೇ ತಂಡದಲ್ಲಿ ಕರೆತರಲಾಗುವದು ಎಂದು ಟೆಲ್‌ ಅವೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿದೆ.

ನಾಳೆ ವಿಮಾನ ದೆಹಲಿಗೆ ತಲುಪಲಿದೆ .

ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯರನ್ನು ಕರೆತರಲು ಭಾರತವು ಗುರುವಾರ ‘ಆಪರೇಷನ್‌ ಅಜಯ್‌’ ಕಾರ್ಯಾಚರಣೆ ಆರಂಭಿಸಿತ್ತು.

ಶುಕ್ರವಾರ ವಿಶೇಷ ವಿಮಾನದಲ್ಲಿ ತೆರಳಿದ ಭಾರತದ ಪ್ರಜೆಗಳ ಬಗ್ಗೆ ಇ-ಮೇಲ್‌ನಲ್ಲಿ ಮಾಹಿತಿ ನೀಡಲಾಗಿದೆ. ನೋಂದಣಿ ಮಾಡಿರುವ ಇತರರಿಗೂ ಮುಂದಿನ ವಿಮಾನಗಳಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದು ರಾಯಭಾರ ಕಚೇರಿ ಪ್ರಕಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!