‘ಆಪರೇಷನ್ ಭೇಡಿಯಾ’: ಎಂಟು ಮಂದಿಯನ್ನು ಕೊಂದ ನರಭಕ್ಷಕ ತೋಳ ಕೊನೆಗೂ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಎಂಟು ಮಂದಿಯನ್ನು ಕೊಂದಿದ್ದ ತೋಳವನ್ನು ಕೊನೆಗೂ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಆದರೆಇನ್ನೂ ಎರಡು ತೋಳಗಳು ಇನ್ನೂ ಸೆರೆಸಿಕ್ಕಿಲ್ಲ.

ಏಳು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಬಹ್ರೈಚ್ ಜಿಲ್ಲೆಯಲ್ಲಿ ಕನಿಷ್ಠ ಎಂಟು ಮಂದಿ ತೋಳಗಳ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ ನಡೆದ ಇತ್ತೀಚಿನ ದಾಳಿಯಲ್ಲಿ ಒಂದು ಶಿಶುವೊಂದು ಬಲಿಯಾಗಿತ್ತು.

6 ತೋಳಗಳ ಹಿಂಡಿನಲ್ಲಿದ್ದ ಈ ದಾಳಿಕೋರ ತೋಳವು ನಿರ್ದಿಷ್ಟ ದಾರಿಯಲ್ಲಿ ಓಡುವಂತೆ ಪಟಾಕಿಗಳನ್ನು ಸಿಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ. ತೋಳದ ಪ್ರಜ್ಞೆ ತಪ್ಪಿಸಿದ ಅಧಿಕಾರಿಗಳು ಮೃಗಾಲಯವೊಂದಕ್ಕೆಸಾಗಿಸಿದ್ದಾರೆ. ಈವರೆಗೂ ಒಟ್ಟು ನಾಲ್ಕು ತೋಳಗಳನ್ನು ಅಧಿಕಾರಿಗಳು ಸೆರೆಹಿಡಿದ್ದಾರೆ. ಇನ್ನೂ ಎರಡು ಕಾಡು, ಹಳ್ಳಿಗಳ ನಡುವೆ ಓಡಾಡಿಕೊಂಡಿವೆ .

ಈ ನರಭಕ್ಷಕ ತೋಳಗಳನ್ನು ಸೆರೆಹಿಡಿಯಲು ಉತ್ತರ ಪ್ರದೇಶ ಸರ್ಕಾರವು ‘ಆಪರೇಷನ್ ಭೇಡಿಯಾ’ ಕಾರ್ಯಾಚರಣೆ ಆರಂಭಿಸಿದೆ. ಬಹ್ರೈಚ್ ಜಿಲ್ಲೆಯ ಮೆಹ್ಸಿ ತಾಲೂಕಿನಲ್ಲಿ ಬೇಟೆಯಾಡುತ್ತಾ ಅಡ್ಡಾಡುತ್ತಿದ್ದ ಈ ತೋಳಗಳ ಹಿಂಡನ್ನು ಹಿಡಿಯುವುದು ಸುಲಭದ ಮಾತಾಗಿರಲಿಲ್ಲ.ನರಭಕ್ಷಕ ತೋಳಗಳನ್ನು ಹಿಡಿಯಲು ಅಧಿಕಾರಿಗಳು 16 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರಣ್ಯ ಮತ್ತು ಹಳ್ಳಿಗಳ ಹೊಲಗಳ ನಡುವೆ ಓಡಾಡುವ ತೋಳಗಳ ಜಾಡು ಹಿಡಿಯಲು ಡ್ರೋನ್ ಕ್ಯಾಮೆರಾಗಳು ಮತ್ತು ಥರ್ಮಲ್ ಡ್ರೋನ್ ಮ್ಯಾಪಿಂಗ್ ತಂತ್ರಜ್ಞಾನಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಳಸಿದ್ದರು. ದಾಳಿಗಳು ಸಂಭವಿಸಿದ ಸಂದರ್ಭದಲ್ಲಿ ತೋಳಗಳ ದಾರಿಯ ದಿಕ್ಕು ಬದಲಿಸುವ ಸಲುವಾಗಿ ಅಧಿಕಾರಿಗಳು ಅನೆಗಳ ಲದ್ದಿ ಮತ್ತು ಮೂತ್ರವನ್ನು ಬಳಸಿದ್ದರು.

ಹಳ್ಳಿಗಳಲ್ಲಿ ಬಾಗಿಲು ಇಲ್ಲದ ಮನೆಗಳಿಗೆ ಕದ ಅಳವಡಿಸಲಾಗುತ್ತಿದೆ. ಎಲ್ಲ ಹಳ್ಳಿಗಳಲ್ಲಿಯೂ ರಾತ್ರಿ ಗಸ್ತು ತಿರುಗುವಿಕೆಯನ್ನು ನಡೆಸಲಾಗುತ್ತಿದೆ. ಜನರಲ್ಲಿ ತೋಳಗಳ ದಾಳಿ ಕುರಿತು ಜಾಗೃತಿ ಮೂಡಿಸುವಂತೆ ಆಶಾ ಕಾರ್ಯಕರ್ತೆಯರಿಗೆ ಹೊಣೆ ವಹಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!