ಜೈಲಿನಲ್ಲಿಯೇ ಕೈದಿಗಳ ನಡುವೆ ಮಾರಾಮಾರಿ: ಓರ್ವನ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೈಲಿನಲ್ಲಿ ಕೈದಿಗಳ ನಡುವೆಯೇ ಮಾರಾಮಾರಿ ನಡೆದಿದ್ದು, ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಾರಾಗೃಹದಲ್ಲಿ ನಡೆದಿದೆ.

ನಾಲ್ವರು ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು , ಓರ್ವನಿಗೆ ಭಾರೀ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಗಾಂಜಾ ಪಾರ್ಟಿ ಕೈದಿ ಮುಜಾಮಿಲ್ ಹಾಗೂ 3-4 ಸಹಚರರಿಂದ ಗಲಾಟೆ ನಡೆದಿದೆ. ತಮಗೆ ತಂಬಾಕು ಪೂರೈಕೆ ಮಾಡಬೇಕೆಂದು ಪಟ್ಟು ಹಿಡಿದು ಜೈಲು ಸಿಬ್ಬಂದಿ ಜತೆ ಗಲಾಟೆ ಮಾಡಿಕೊಂಡಿದ್ದಾರೆ. ಆದ್ರೆ, ಗಾಂಜಾ ದೊರೆಯದ ಹಿನ್ನೆಲೆಯಲ್ಲಿ ಕೈದಿಗಳು ಗಲಾಟೆ ನಡೆಸಿದ್ದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!