‘ಆಪರೇಷನ್ ಗಂಗಾ’: ಬುಡಾಪೆಸ್ಟ್ ನಿಂದ ಭಾರತಕ್ಕೆ ಬಂತು ಕೊನೆಯ ವಿಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುದ್ಧಪೀಡಿತ ಉಕ್ರೇನ್ ನಿಂದ ಭಾರತೀಯರನ್ನು ಕರೆಯುವ ಭರದಿಂದ ನಡೆಯುತ್ತಿದ್ದು, ‘ಆಪರೇಷನ್ ಗಂಗಾ’ ಮೂಲಕ ಕೇಂದ್ರ ಸರಕಾರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ ನಂತರ ಬುಡಾಪೆಸ್ಟ್ ನಿಂದ ಇಂದು ಕೊನೆಯ ಬ್ಯಾಚಿನ 6, 711 ಭಾರತೀಯ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹಂಗೇರಿಯಿಂದ ದೆಹಲಿಗೆ ವಾಪಸ್ಸಾಗಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಸಚಿವರು, ದೇಶದ ಯುವ ಜನರು, ಇದೀಗ ತಮ್ಮ ಸ್ಥಳಗಳಿಗೆ ತೆರಳಬಹುದಾಗಿದೆ. ತಮ್ಮ ಪೋಷಕರು ಮತ್ತು ಕುಟುಂಬಸ್ಥರನ್ನು ಸೇರಬಹುದಾಗಿದೆ ಎಂದು ತಿಳಿಸಿದ್ದಾರೆ.
ಇಂದು ದೆಹಲಿಗೆ ಬುಡಾಪೆಸ್ಟ್‌ನ ನಮ್ಮ 6, 711 ವಿದ್ಯಾರ್ಥಿಗಳ ಕೊನೆಯ ಬ್ಯಾಚ್‌ನೊಂದಿಗೆ ತಲುಪಿದ್ದು, ಸಂತೋಷವಾಗಿದೆ. ಇನ್ನು ಈ ಯುವಕರು ಮನೆಗೆ ತಲುಪಿದಾಗ ಸಂತೋಷ, ಉತ್ಸಾಹ ಮತ್ತು ಸಮಾಧಾನವಿದೆ ಮತ್ತು ಶೀಘ್ರದಲ್ಲೇ ಅವರ ಪೋಷಕರು ಮತ್ತು ಕುಟುಂಬಗಳೊಂದಿಗೆ ಇರುತ್ತಾರೆ. ನೆರವಾಗಲು ಬೇಕಾದಷ್ಟು ಸೌಕರ್ಯಗಳಿರುವುದಾಗಿ ಅವರು ಹೇಳಿದ್ದಾರೆ.
ಖಾರ್ಕಿವ್ ಮತ್ತು ಸುಮಿಯನ್ನು ಹೊರತುಪಡಿಸಿ, ಉಕ್ರೇನ್‌ನ ಉಳಿದ ಪ್ರದೇಶಗಳಿಂದ ಬಹುತೇಕ ಎಲ್ಲ ಭಾರತೀಯರನ್ನು ಸ್ಥಳಾಂತರಿಸಲಾಗಿದೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!