ಛತ್ತೀಸಗಢದಲ್ಲಿ ಕಾರ್ಯಾಚರಣೆ: 19 ನಕ್ಸಲರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 19 ನಕ್ಸಲರನ್ನು ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದೆ. ಈ ಪೈಕಿ ಮೂವರ ತಲೆಗೆ ಬಹುಮಾನವನ್ನು ಘೋಷಿಸಲಾಗಿತ್ತು.

ಜಾಗರಗುಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ನಕ್ಸಲರನ್ನು ಬಂಧಿಸಲಾಗಿದೆ.ಭಾನುವಾರ ಭೆಜ್ಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐವರನ್ನು ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್) 219 ಮತ್ತು 150ನೇ ಬೆಟಾಲಿಯನ್, ಕೋಬ್ರಾ ಪಡೆಯ 201ನೇ ಬೆಟಾಲಿಯನ್‌ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲರ ಬಂಧನವಾಗಿದೆ.

14 ನಕ್ಸಲರು 18 ರಿಂದ 40 ವರ್ಷ ವಯಸ್ಸಿನವರಾಗಿದ್ದಾರೆ. ಈ ಪೈಕಿ ಮೂವರ ತಲೆಗೆ ತಲಾ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ನಕ್ಸಲರಿಂದ ಮೂರು ಜಿಲೆಟಿನ್ ಕಡ್ಡಿಗಳು, 300 ಗ್ರಾಂ ಗನ್ ಪೌಡರ್, ಸಿಡಿಮದ್ದು, ಡೆಟೊನೇಟರ್‌ಗಳು, ಎಲೆಕ್ಟ್ರಿಕ್ ವೈಯರ್ ಮತ್ತು ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!