ದೀಪಾವಳಿ ಹಬ್ಬದ ಸಂಭ್ರಮ: ಈ ರಾಜ್ಯಗಳಲ್ಲಿ ಪಟಾಕಿ ಬ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು,ಇದರ ನಡುವೆ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಹಲವಾರು ರಾಜ್ಯಗಳು ದೀಪಾವಳಿಯಲ್ಲಿ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿವೆ.

ಪರಿಸರ ಕಾಳಜಿಯನ್ನು ಉದ್ದೇಶಿಸಿ ದೆಹಲಿ, ಪಂಜಾಬ್, ಹರಿಯಾಣ ಮತ್ತು ತಮಿಳುನಾಡಿನಂತಹ ಹಲವಾರು ರಾಜ್ಯಗಳಲ್ಲಿ ಪಟಾಕಿ ಬಳಕೆಯ ಮೇಲೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಲಾಗಿದೆ. ದೀಪಾವಳಿ ಹಬ್ಬದ ಆಚರಣೆಯ ಅವಧಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುವುದನ್ನು ಕಡಿಮೆ ಮಾಡುವ ಗುರಿಯನ್ನು ಈ ನಿಯಮಗಳು ಹೊಂದಿವೆ.

ಕರ್ನಾಟಕ ಸರ್ಕಾರವು ದೀಪಾವಳಿಯ ಸಮಯದಲ್ಲಿ ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿಸಿದೆ. ಯಾವುದೇ ಔಪಚಾರಿಕ ನಿಷೇಧವನ್ನು ಹೊರಡಿಸದಿದ್ದರೂ ಸಹ ಪಟಾಕಿ ಬಳಕೆಯನ್ನು ರಾತ್ರಿ 8ರಿಂದ 10ರವರೆಗೆ ನಿರ್ದಿಷ್ಟ ಸಮಯಕ್ಕೆ ಸೀಮಿತಗೊಳಿಸುವಂತೆ ಸೂಚಿಸಿದೆ.

ದೆಹಲಿಯಲ್ಲಿ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಸಾಮಾನ್ಯವಾಗಿ ಪ್ರತಿ ಚಳಿಗಾಲದಲ್ಲಿ ತೀವ್ರವಾದ ಗಾಳಿಯ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು (DPCC) ಜನವರಿ 1, 2025ರವರೆಗೆ ಪಟಾಕಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ. ಇದು ಆನ್‌ಲೈನ್ ಮಾರಾಟವನ್ನು ಒಳಗೊಂಡಿದೆ.

ಆದರೆ, ದೆಹಲಿಯಲ್ಲಿ ಸೀಮಿತ ಗಂಟೆಗಳಲ್ಲಿ ಕಡಿಮೆ ಹಾನಿಕಾರಕವಾದ ‘ಗ್ರೀನ್ ಕ್ರ್ಯಾಕರ್‌ಗಳಿಗೆ’ ಮಾತ್ರ ಅನುಮತಿ ನೀಡಲಾಗಿದೆ. ಹಸಿರು ಪಟಾಕಿಗಳು ಬೇರಿಯಂ ಮತ್ತು ಸೀಸದಂತಹ ವಿಷಕಾರಿ ರಾಸಾಯನಿಕಗಳಿಂದ ಮುಕ್ತವಾಗಿವೆ.

ಬಿಹಾರದ ರಾಜ್ಯ ಅಧಿಕಾರಿಗಳು ಪಾಟ್ನಾ, ಗಯಾ, ಮುಜಾಫರ್‌ಪುರ ಮತ್ತು ಹಾಜಿಪುರದಂತಹ ಪ್ರಮುಖ ನಗರಗಳಲ್ಲಿ ಹಸಿರು ಪರ್ಯಾಯಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

ಮಹಾರಾಷ್ಟ್ರವು ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿತು. ಸಾಂಪ್ರದಾಯಿಕವಾದವುಗಳಿಗಿಂತ ಸುಮಾರು 30% ಕಡಿಮೆ ಮಾಲಿನ್ಯವನ್ನು ಉಂಟುಮಾಡುವ ಹಸಿರು ಪಟಾಕಿಗಳನ್ನು ಮಾತ್ರ ಅನುಮತಿಸಿತು. ಇದಲ್ಲದೆ, ಮುಂಬೈ ಪೊಲೀಸರು ಅಕ್ಟೋಬರ್ 23ರಿಂದ ನವೆಂಬರ್ 24ರವರೆಗೆ ಸ್ಕೈ ಲ್ಯಾಂಟರ್ನ್​ಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!