ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಸಿನಿಮಾವೊಂದು ಅನೌನ್ಸ್ ಆಗಿದೆ. ಜೊತೆಗೆ ಪೋಸ್ಟರ್ ಕೂಡ ರಿಲೀಸ್ ಆಗಿರೋದು ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ನಿಕಿ ವಿಕಿ ಭಗ್ನಾನಿ ಫಿಲ್ಮ್ಸ್ ಮತ್ತು ದಿ ಕಂಟೆಂಟ್ ಎಂಜಿನಿಯರ್ ಅಧಿಕೃತವಾಗಿ ಆಪರೇಷನ್ ಸಿಂದೂರ್ ಎಂಬ ಹೊಸ ಚಿತ್ರವನ್ನು ಘೋಷಿಸಿದೆ. ಚಿತ್ರದ ಪಾತ್ರವರ್ಗವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಆಪರೇಷನ್ ಸಿಂದೂರ್ ಚಿತ್ರದ ಪೋಸ್ಟರ್‌ನಲ್ಲಿ ಒಬ್ಬ ಮಹಿಳಾ ಅಧಿಕಾರಿ, ಸಮವಸ್ತ್ರ ಧರಿಸಿ, ರೈಫಲ್ ಹಿಡಿದು, ಸಿಂದೂರ್ ಹಚ್ಚಿಕೊಳ್ಳುತ್ತಿರುವ ಚಿತ್ರವಿದೆ. ಹಿನ್ನಲೆಯಲ್ಲಿ ಯುದ್ಧದ ಟ್ಯಾಂಕರ್‌ಗಳು, ಮುಳ್ಳುತಂತಿ ಮತ್ತು ಫೈಟರ್ ಜೆಟ್‌ಗಳು ಮೇಲೇರುತ್ತಿರುವ ಈ ಪೋಸ್ಟರ್ ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ವಿಷಯಗಳನ್ನು ನೆನಪಿಸುತ್ತದೆ.