ಆಪರೇಷನ್‌ ಸಿಂಧೂರ್‌: ರಾಜ್ಯಾದ್ಯಂತ ಕುಂಕುಮದ ತಿಲಕವಿಟ್ಟು ಸಂಭ್ರಮ

ಪಹಲ್ಗಾಮ್‌ ದಾಳಿಗೆ ಭಾರತ ದಿಟ್ಟ ಉತ್ತರ ನೀಡಿದ್ದು, ಪಾಕ್‌ ಹಾಗೂ ಪಿಒಕೆ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಬರೀ ಉಗ್ರರನ್ನು ಟಾರ್ಗೆಟ್‌ ಮಾಡಿದ್ದು, ನೂರಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿಯೂ  ಸಂಭ್ರಮಾಚರಣೆ ಜೋರಾಗಿದ್ದು, ಹಣೆಗೆ ತಿಲಕ ಇಟ್ಟು ಖುಷಿ ಪಟ್ಟಿದ್ದಾರೆ.

ಆಪರೇಷನ್ ಸಿಂಧೂರ, ಕಲಬುರಗಿಯಲ್ಲಿ ಸಿಂಧೂರ ಹಚ್ಚಿ ಸಂಭ್ರಮ


ಭಾರತ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವಾಯು ದಾಳಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದ್ದು,ಇತ್ತ ಕಲಬುರಗಿ ನಗರದಲ್ಲಿ ಮಹಿಳೆಯರಿಗೆ ಸಿಂಧೂರ ಹಚ್ಚಿ ಸಂಭ್ರಮಾಚರಣೆ ನಡೆಸಲಾಯಿತು.

ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಹಿಂದೂ ಜಾಗೃತಿ ಸೇನೆ ಕಲಬುರಗಿ ಹಾಗೂ ರಾಮ ಸೇನೆ ಘಟಕದಿಂದ ಪಟಾಕಿ ಸಿಡಿಸಿ,ದೇಶವಾಸಿಗಳಿಗೆ ಸಿಹಿ ಹಂಚುವ ಮೂಲಕ ಭಾರತದ ಸೈನಿಕರ ಪರಾಕ್ರಮತೆಯನ್ನು ಸಂಭ್ರಮಿಸಿದರು.

ಹಾವೇರಿಯಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸುವ ಮೂಲಕ ಭಾರತೀಯ ಸೇನೆಗೆ ಬೆಂಬಲ


ಆಪರೇಷನ್ ಸಿಂಧೂರಕ್ಕೆ ‘ತಿಲಕ’ ಅಭಿಯಾನದ ಆರಂಭಿಸುವ ಮೂಲಕ ಜಿಲ್ಲಾ ಬಿಜೆಪಿ ಬೆಂಬಲಿಸಿದೆ. ಈ ಮೂಲಕ ಸಹಿ ಸಂಗ್ರಹ ಅಭಿಯಾನ ನಡೆಸುವ ಮೂಲಕ ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಂವ ಉಗ್ರದಾಳಿ ಖಂಡಿಸಿ, ಮಂಗಳವಾರ ತಡರಾತ್ರಿ ಪಾಕ್ ಮತ್ತು ಪಿಒಕೆಯ ಒಂಬತ್ತು ಸ್ಥಳಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿ ಸುಮಾರು 80ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿಸಿರುವುದನ್ನು ಬೆಂಬಲಿಸಿ,
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಹಿ ಅಭಿಯಾನಕ್ಕೆ ಚಾಲನರ ನೀಡಿದರು.

ಈ ವೇಳೆ ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಇದು ಸಂಭ್ರಮಾಚರಣೆ, ವಿಜಯೋತ್ಸವ ಅಲ್ಲ. ನಮ್ಮ ಭಾರತೀಯ ಸೇನೆಗೆ ಇದು ನಮ್ಮ ನೈತಿಕ ಬೆಂಬಲವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮತ್ತು ಅದರ ಸಿಎಂ ಸಿದ್ದರಾಮಯ್ಯ ಪಾಖ್ಗೆ ಬೆಂಬಲಿಸುವ ರೀತಿಯಲ್ಲಿ ಹೇಳಿಕೆ ನೀಡಿ ಯುದ್ದ ಬೇಡ ಎಂಬ ಹೇಳಿಕೆ ನೀಡಿದ್ದು ಇದು ಅವರ ಮುಸ್ಲಿಂ ತುಷ್ಠಿಕರಣದ ಮಾದರಿ ಎಂದು ದೂರಿದರು.

ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ

ಪಹಲ್ಗಾಮ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿರುವ ಹಿನ್ನೆಲೆ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಳಿಸಬೇಕು ಎಂದು ಆಗ್ರಹಿಸಿದರು.

ಬುಧವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಭಾರತಿ ಸೈನ್ಯದ ಸಾಹಸಕ್ಕೆ ಅಭಿನಂದನೆ ಸಲ್ಲಿಸಿದರು.
ಭಾರತ ಮಾತಾಕೀ ಜೈ, ಪ್ರಧಾನಿ ಮೋದಿಗೆ ಜೈಯವಾಗಲಿ, ಭಾರತ ಸೈನ್ಯಕ್ಕೆ ಜೈಯವಾಗಲಿ ಎಂಬ ಘೋಷಣೆ ಕೂಗಿದರು. ಪ್ರತಿಯೊಬ್ಬರ ತಲೆಗೆ ಕುಂಕುಮ ಹಚ್ಚಿ ಅಪರೇಷನ್ ಸಿಂಧೂರ ಅಭಿನಂದನೆ ಸಲ್ಲಿಸಿದರು.

ಬಳಿಕ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ನರೇಂದ್ರ ಮೋದಿ ನೇತೃತ್ವದಲ್ಲಿ ಆಪರೇಷನ್ ಸಿಂಧೂರ ಮೂಲಕ ಅರ್ಥಗರ್ಭಿತವಾದ ಕೆಲಸ ಮಾಡಲಾಗಿದೆ. ಈ ಮೂಲಕ ಯುದ್ದ ಪ್ರಾರಂಭವಾಗಿದೆ. ದೇಶದ ಜನರು ಪ್ರತಿಕಾರಕ್ಕೆ ಕಾಯುತ್ತಿದ್ದರು. ಅದರಂತೆ ಸೇನೆ 9 ಕಡೆಗೆ ದಾಳಿ ಮಾಡಿದೆ‌. ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here