ಪಿಎಫ್‌ಐ ಚಿಂತನೆಯನ್ನು ವಿರೋಧಿಸುತ್ತೇನೆ, ಆದರೆ ಬ್ಯಾನ್ ತಪ್ಪು: ಅಸಾದುದ್ದೀನ್‌ ಓವೈಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಪಾಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾ ಅದರ 8 ವಿವಿಧ ಅಂಗಗಳನ್ನು ಕೇಂದ್ರ ಸರ್ಕಾರ ಯುಎಪಿಎ ಕಾಯ್ದೆಯಡಿ ಐದು ವರ್ಷ ನಿಷೇಧ ಹೇರಿದೆ.

ಆದರೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ಪಿಎಫ್‌ಐ ಬ್ಯಾನ್‌ ವಿಚಾರವಾಗಿ ಕಟು ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ.

ಪಿಎಫ್‌ಐ ಚಿಂತನೆಯನ್ನು ನಾವು ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದೇವೆ, ಆದರೆ ಅದರ ಮೇಲಿನ ನಿಷೇಧವು ಸಂಪೂರ್ಣವಾಗಿ ತಪ್ಪು ಎಂದು ಅವರು ಹೇಳಿದ್ದಾರೆ. ಅಪರಾಧ ಎಸಗಿದ ಕೆಲ ವ್ಯಕ್ತಿಗಳ ಕೃತ್ಯಗಳಿಗೆ ಸಂಘಟನೆಯನ್ನೇಕೆ ನಿಷೇಧಿಸಬೇಕು? ಇದು ಸರಿಯಲ್ಲ ಎಂದರು. ಬಲಪಂಥೀಯ ಬಹುಸಂಖ್ಯಾತ ಸಂಘಟನೆಗಳನ್ನು ಸರ್ಕಾರ ಯಾವಾಗ ನಿಷೇಧಿಸುತ್ತದೆ? ಅವರನ್ನು ಏಕೆ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ರೀತಿಯ ನಿಷೇಧ ಅಪಾಯಕಾರಿ. ತನ್ನ ಅಭಿಪ್ರಾಯವನ್ನು ಹೇಳಲು ಬಯಸುವ ಪ್ರತಿಯೊಬ್ಬ ಮುಸಲ್ಮಾನನ ಮೇಲೆ ಇದು ನಿಷೇಧವಾಗಿದೆ. ಭಾರತದ ಕರಾಳ ಕಾನೂನು ಯುಎಪಿಎ ಅಡಿಯಲ್ಲಿ ಈಗ ಪ್ರತಿಯೊಬ್ಬ ಮುಸ್ಲಿಂ ಯುವಕನನ್ನು ಪಿಎಫ್‌ಐ ಹೆಸರಿನಲ್ಲಿ ಬಂಧಿಸಲಾಗುತ್ತದೆ ಎಂದು ಅವರು ಹೇಳಿದರು. ನಾನು ಯುಎಪಿಎಯನ್ನು ವಿರೋಧಿಸಿದ್ದೇನೆ ಮತ್ತು ಯುಎಪಿಎ ಅಡಿಯಲ್ಲಿರುವ ಎಲ್ಲಾ ಕ್ರಮಗಳನ್ನು ಯಾವಾಗಲೂ ವಿರೋಧಿಸುತ್ತೇನೆ. ಈ ನಿಷೇಧವು ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ಸ್ವಾತಂತ್ರ್ಯದ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಓವೈಸಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!