ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಬಿಜೆಪಿ ಸರಕಾರವನ್ನು ಸೋಲಿಸಿ ಅಧಿಕಾರ ಪಡೆಯಲು ವಿಪಕ್ಷಗಳು ತಯಾರಿನಡೆಸುತ್ತಿದ್ದು, ಈಗಾಗಲೇ ಎರಡು ಸಭೆ ಕೂಡ ನಡೆಸಿವೆ.
ಇದೀಗ ವಿಪಕ್ಷಗಳ ಒಕ್ಕೂಟ I-N-D-I-A 3ನೇ ಸಭೆಗೆ ತಯಾರಾಗುತ್ತಿದೆ. ಮುಂಬೈನಲ್ಲಿ ನಡೆಯಲಿದೆ.
ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ I-N-D-I-A ಸಭೆ ನಿಗದಿಯಾಗಿದ್ದು, ಸಂಪೂರ್ಣ ಜವಾಬ್ದಾರಿಯನ್ನು ಮಹಾ ವಿಕಾಸ ಆಘಾಡಿ ಸರ್ಕಾರದ ಭಾಗವಾಗಿದ್ದ ಶಿವಸೇನೆ ಹೊತ್ತುಕೊಂಡಿದೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಕಾಂದ್ರೆಸ್ ಅಧ್ಯಕ್ಷ ನಾನಾ ಪಟೋಲೆ ಕಾರ್ಯಕ್ರಮದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.ಈ ಮೂರು ಪಕ್ಷಗಳಿಂದ ತಲಾ ಐದೈದು ನಾಯಕರಿಗೆ ಕಾರ್ಯಕ್ರಮದ ಹೊಣೆ ನೀಡಲಾಗಿದೆ.
I-N-D-I-A ಒಕ್ಕೂಟದ ಮೂರನೇ ಸಭೆ ಅತ್ಯಂತ ಮಹತ್ವದ್ದಾಗಿದೆ. ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆದ ನೀಡಿದ ಬಳಿಕ ನಡೆಯುತ್ತಿರುವ ಸಭೆ ಇದಾಗಿದೆ.