March 13, 2026
Friday, March 13, 2026
spot_img

ಚುನಾವಣಾ ಆಯುಕ್ತ ಜ್ಞಾನೇಶ್ ಪದಚ್ಯುತಿಗೆ ಸಂಸತ್ತಿನಲ್ಲಿ ನೊಟೀಸ್ ಸಲ್ಲಿಸಿದ ಪ್ರತಿಪಕ್ಷಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನ ಎರಡೂ ಸದನಗಳಲ್ಲಿ ಶುಕ್ರವಾರಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸುವಂತೆ ಕೋರಿ ವಿರೋಧ ಪಕ್ಷಗಳ ನೊಟೀಸ್ ಸಲ್ಲಿಸಿದ್ದಾರೆ.

ಲೋಕಸಭೆಯಲ್ಲಿ 130 ಸಂಸದರು ಮತ್ತು ರಾಜ್ಯಸಭೆಯಲ್ಲಿ 63 ಸಂಸದರು ನೊಟೀಸ್ ಗೆ ಸಹಿ ಹಾಕಿದ್ದಾರೆ .ಇಂಡಿಯಾ ಬಣದ ಎಲ್ಲಾ ಪಕ್ಷಗಳ ಸದಸ್ಯರು ಸಹಿ ಹಾಕಿದ್ದು, ಆಮ್ ಆದ್ಮಿ ಪಕ್ಷ(ಎಎಪಿ) ಕೂಡ ಈ ಕ್ರಮವನ್ನು ಬೆಂಬಲಿಸಿದೆ.

ನಿಯಮಗಳ ಪ್ರಕಾರ, ಲೋಕಸಭೆಯಲ್ಲಿ ಸಿಇಸಿಯನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸುವ ನೊಟೀಸ್ ಗೆ ಕನಿಷ್ಠ 100 ಸಂಸದರು ಸಹಿ ಹಾಕಬೇಕು ಮತ್ತು ರಾಜ್ಯಸಭೆಯಲ್ಲಿ 50 ಸದಸ್ಯರ ಸಹಿ ಅಗತ್ಯವಿದೆ.

ಸಿಇಸಿ ವಿರುದ್ಧ ನೊಟೀಸ್ ನಲ್ಲಿ ಏಳು ಆರೋಪಗಳನ್ನು ಪಟ್ಟಿ ಮಾಡಲಾಗಿದೆ. ಪಕ್ಷಪಾತಿ ಮತ್ತು ತಾರತಮ್ಯದ ನಡವಳಿಕೆ, ಚುನಾವಣಾ ವಂಚನೆಯ ತನಿಖೆಗೆ ಉದ್ದೇಶಪೂರ್ವಕ ಅಡಚಣೆ ಆರೋಪಗಳಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !