ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಮಾಡಿದರೆ ಅದು ಪ್ರವಾಸಿಗರ ತಾಣವಾಗಿಬಿಡುವ ಆತಂಕವಿದೆ, ಹಾಗಾಗಬಾರದು. ಚಾಮುಂಡಿ ಬೆಟ್ಟವು ತಾಯಿ ಚಾಮುಂದೇಶ್ವರಿಯ ಕ್ಷೇತ್ರ, ಅನೇಕ ಶ್ರದ್ಧಾಳುಗಳು ತಾಯಿಯ ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತಾರೆ. ಹಾಗಾಗಿ ಚಾಮುಂಡಿ ಬೆಟ್ಟವು ಶ್ರದ್ಧಾ ಕೇಂದ್ರವಾಗೇ ಉಳಿಯಬೇಕು. ಈ ಹಿನ್ನೆಲೆಯಲ್ಲಿ ರೋಪ್ ವೇ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಲಾಗಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು “ಚಾಮುಂಡಿ ಬೆಟ್ಟವು ಶ್ರದ್ಧಾ ಕೇಂದ್ರವಾಗೇ ಉಳಿಯಲಿ. ಹಾಗಾಗಿ ರೋಪ್‌ವೇ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಲಾಗಿದ್ದು ಶಾಸಕ ಜಿಟಿ ದೇವೇಗೌಡರು ಹಾಗೂ ಸಚಿವ ಎಸ್‌ಟಿ ಸೋಮಶೇಖರ್ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲಯಲ್ಲಿ ರೋಪ್‌ವೇ ನಿರ್ಮಾಣವನ್ನು ಕೈ ಬಿಡಲಾಗುವುದು” ಎಂದು ಅವರು ತಿಳಿಸಿದ್ದಾರೆ.