May 15, 2026
Friday, May 15, 2026
spot_img

ಕ್ಷೇತ್ರ ವಿಂಗಡಣೆ ವಿರೋಧ: ತಮಿಳುನಾಡಿನಲ್ಲಿ ‘ಕಪ್ಪು ಬಾವುಟ’ ಸಮರಕ್ಕೆ ಸಿಎಂ ಸ್ಟಾಲಿನ್ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ಷೇತ್ರಗಳ ಪುನರ್ವಿಂಗಡಣೆ ಎಂಬ ‘ತೂಗುಗತ್ತಿ’ ಈಗ ದಕ್ಷಿಣದ ರಾಜ್ಯಗಳ ಗಂಟಲಿಗೆ ಬಂದಿದೆ ಎಂದು ಎಚ್ಚರಿಸಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಕೇಂದ್ರದ ನೀತಿಗಳ ವಿರುದ್ಧ ಸಮರ ಸಾರಿದ್ದಾರೆ. ಕೇಂದ್ರ ಸರ್ಕಾರವು ನಾಳೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲಿರುವ ಮೂರು ಪ್ರಮುಖ ಮಸೂದೆಗಳನ್ನು ವಿರೋಧಿಸಿ ತಮಿಳುನಾಡಿನಾದ್ಯಂತ ‘ಕಪ್ಪು ಬಾವುಟ’ ಪ್ರದರ್ಶಿಸಲು ಅವರು ಕರೆ ನೀಡಿದ್ದಾರೆ.

ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಈ ಕೆಳಗಿನ ಮೂರು ಮಸೂದೆಗಳನ್ನು ಪ್ರಸ್ತಾಪಿಸಿದೆ:

ಸಂವಿಧಾನದ 131ನೇ ತಿದ್ದುಪಡಿ ಮಸೂದೆ 2026

ಕ್ಷೇತ್ರಗಳ ಪುನರ್ ವ್ಯಾಖ್ಯಾನ ಮಸೂದೆ 2026

ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆ 2026

ಈ ಮಸೂದೆಗಳು ಜಾರಿಯಾದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯಕ್ಕೆ ಧಕ್ಕೆಯಾಗಲಿದೆ ಎಂಬುದು ಡಿಎಂಕೆ ವಾದ. “ಒಂದು ಕಾಲದಲ್ಲಿ ನಮ್ಮ ತಲೆಯ ಮೇಲೆ ನೇತಾಡುತ್ತಿದ್ದ ಕತ್ತಿ ಈಗ ನಮ್ಮ ಗಂಟಲಿಗೆ ಇಳಿದಿದೆ” ಎಂದು ಹೇಳುವ ಮೂಲಕ ಸ್ಟಾಲಿನ್ ಈ ಪ್ರಕ್ರಿಯೆಯ ಗಂಭೀರತೆಯನ್ನು ಬಿಂಬಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !