May 20, 2026
Wednesday, May 20, 2026
spot_img

‘ಮೆಲೋಡಿ’ ಸ್ನೇಹದ ಸಿಹಿ ಸಂದೇಶ: ಮೆಲೋನಿಗೆ ಮೋದಿಯಿಂದ ಸ್ಪೆಷಲ್ ಗಿಫ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯರ ನೆಚ್ಚಿನ ‘ಮೆಲೋಡಿ’ ಚಾಕೊಲೇಟ್ ಇದೀಗ ಅಂತಾರಾಷ್ಟ್ರೀಯ ರಾಜತಾಂತ್ರಿಕ ವೇದಿಕೆಯಲ್ಲೂ ಸದ್ದು ಮಾಡಿದೆ.

ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಪ್ಯಾಕ್ ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ. ಈ ವಿಶೇಷ ಕ್ಷಣದ ವಿಡಿಯೋವನ್ನು ಮೆಲೋನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ಸಿಹಿ ಉಡುಗೊರೆಯ ಹಿಂದೆ ಸ್ನೇಹದ ಸಂದೇಶ

ಮೆಲೋನಿಗೆ ಚಾಕೊಲೇಟ್ ನೀಡಿದ ವೇಳೆ, “ಭಾರತ ಮತ್ತು ಇಟಲಿ ನಡುವಿನ ಸ್ನೇಹವೂ ಇದೇ ರೀತಿ ಸಿಹಿಯಾಗಿರಲಿ” ಎಂದು ಮೋದಿ ಹಾರೈಸಿದರೆಂದು ತಿಳಿದುಬಂದಿದೆ. ಈ ಸರಳ ಆದರೆ ವಿಶೇಷ ಉಡುಗೊರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ:

ಐದು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತ

ಐದು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ಮೋದಿ ಮಂಗಳವಾರ ರೋಮ್‌ಗೆ ಆಗಮಿಸಿದ್ದಾರೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದೆ.

ಭಾರತ-ಇಟಲಿ ಸಂಬಂಧ ಮತ್ತಷ್ಟು ಬಲ

ವ್ಯಾಪಾರ, ಹೂಡಿಕೆ, ರಕ್ಷಣಾ ಕ್ಷೇತ್ರ, ವಿಜ್ಞಾನ-ತಂತ್ರಜ್ಞಾನ, ಶುದ್ಧ ಇಂಧನ ಮತ್ತು ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಉಭಯ ರಾಷ್ಟ್ರಗಳು ಮುಂದಾಗಿವೆ. 2025-2029ರ ಜಂಟಿ ಕಾರ್ಯತಂತ್ರದ ಯೋಜನೆಯಡಿ ಎರಡು ದೇಶಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಈ ಭೇಟಿಯ ಪ್ರಮುಖ ಅಂಶವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !