ನನ್ನ ಆದೇಶದಂತೆಯೇ ಸ್ಪೈ ಬಲೂನ್‌ ಹೊಡೆದಿದ್ದಾರೆ: ಬಿಡೆನ್‌ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದ ಗೂಢಚಾರಿಕೆ ಬಲೂನ್ ಅನ್ನು ತಕ್ಷಣವೇ ಹೊಡೆದುರುಳಿಸಲು ನನ್ನ ಆದೇಶದಂತೆ ವಾಯುಪಡೆಯು ಹೊಡೆದುರುಳಿಸಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಸ್ಪಷ್ಟಪಡಿಸಿದರು. ಪತ್ತೇದಾರಿ ಬಲೂನ್ ಅನ್ನು ಪೆಂಟಗನ್ ಯುದ್ಧ ವಿಮಾನದ ಸಹಾಯದಿಂದ ಸಾಗರಕ್ಕೆ ಕೊಂಡೊಯ್ದು ಯಶಸ್ವಿಯಾಗಿ ಹೊಡೆದುರುಳಿಸಲಾಯಿತು ಎಂದು ಮೇರಿಲ್ಯಾಂಡ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಡೆನ್ ಈ ಕುರಿತು ಮಾತನಾಡಿದರು.

ಬುಧವಾರವೇ ಅಧಿಕಾರಿಗಳು ನನಗೆ ಬಲೂನಿನ ವಿವರಗಳನ್ನು ನೀಡಿದರು. ಆದಷ್ಟು ಬೇಗ ಅದನ್ನು ಕೆಡವಲು ಪೆಂಟಗನ್‌ಗೆ ಆದೇಶ ನೀಡಿದ್ದೇನೆ. ನೆಲದ ಮೇಲೆ ಯಾರಿಗೂ ಹಾನಿಯಾಗದಂತೆ ಅದನ್ನು ಕೆಡವಲು ಅಧಿಕಾರಿಗಳು ನಿರ್ಧರಿಸಿ ಸಮುದ್ರದ ತಳದಲ್ಲಿ ಬೀಳಿಸಿದರು ಎಂದು ಬಿಡೆನ್ ಹೇಳಿದರು.

ಪತ್ತೇದಾರಿ ಬಲೂನ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿದ ಅಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ. ತನಿಖೆಯ ನಂತರ ಹೆಚ್ಚಿನ ವಿವರ ತಿಳಿಯಲಿದೆ. ಇದನ್ನು ಸುರಕ್ಷಿತ ಪ್ರದೇಶದಲ್ಲಿ ಕೆಡವಲು ಅಧಿಕಾರಿಗಳು ನಿರ್ಧರಿಸಿದ್ದರಿಂದ ಸಮಯ ಹಿಡಿಯಿತು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!