ಹೊಸದಿಗಂತ ಶಿವಮೊಗ್ಗ:
ಮಕರ ಸಂಕ್ರಮಣದ ನಿಮಿತ್ತ ತುಂಗ ಭದ್ರಾ ಸಂಗಮ ಸ್ಥಳವಾದ ಸಮೀಪದ ಕೂಡಲಿಯಲ್ಲಿ ಪುಣ್ಯ ಸ್ನಾನ ನಡೆಯುವ ವೇಳೆ ಕಡಲೆ ಹಿಟ್ಟು ಉಚಿತವಾಗಿ ವಿತರಿಸಲು ವಿವಿಧ ಸಂಘಟನೆಗಳು ಮುಂದಾಗಿವೆ.
ವಿಷ ಮುಕ್ತ ಪುಣ್ಯ ಸ್ನಾನ ನಡೆಯಬೇಕೆಂಬ ಉದ್ದೇಶದೊಂದಿಗೆ ಈ ಪ್ರಯತ್ನಕ್ಕೆ ಸಂಘಟನೆಗಳು ಕೈ ಹಾಕಿವೆ. ಸಾಬೂನು, ಶಾಂಪೂ ಸ್ನಾನ ಬೇಡ, ಕಡಲೆ ಹಿಟ್ಟಿನೊಂದೊಗೆ ವಿಷ ಮುಕ್ತ ಸ್ನಾನ ಮಾಡಿ ಎಂದು ಸಂಘಟನೆಗಳು ಕರೆ ನೀಡಿವೆ.
ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ, ನಿರ್ಮಲ ತುಂಗ‘ದ್ರಾ ಅಭಿಯಾನ, ವಿವಿ‘ ರೋಟರಿ ಸಂಸ್ಥೆಗಳು, ಓಪನ್ ಮೈಂಡ್ ಶಾಲೆಗಳು ಈ ಅಭಿಯಾನದಲ್ಲಿ ಕೈ ಜೋಡಿಸಲಿವೆ. ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಉಚಿತವಾಗಿ ಕಡಲೆಹಿಟ್ಟನ್ನು ಪೂರೈಕೆ ಮಾಡುತ್ತಿದೆ. ಪುಣ್ಯ ಸ್ನಾನಕ್ಕೆ ಬರುವ ಸಾರ್ವಜನಿಕರಿಗೆ ಉಚಿತವಾಗಿ ಕಡಲೆಹಿಟ್ಟು ನೀಡಲು 100 ಕ್ಕೂ ಹೆಚ್ಚು ಸ್ವಯಂ ಸೇವಕರ ತಂಡ ಸಿದ್ಧವಾಗಿದೆ.
ರಾಷ್ಟ್ರೀಯ ಪರ್ಯಾವರಣ ಟ್ರಸ್ಟ್ ಹಾಗೂ ನಿರ್ಮಲ ತುಂಗ‘ದ್ರಾ ಅಭಿಯಾನದ ವತಿಯಿಂದ ಇತ್ತೀಚೆಗೆ ತುಂಗಾ ನದಿ ಜನಿಸುವ ಶೃಂಗೇರಿಯಿಂದ ಕೊಪ್ಪಳದ ಕಿಷ್ಕಿಂದೆವರೆಗೆ ಜನಜಾಗೃತಿ ಪಾದಯಾತ್ರೆ ನಡೆಸಲಾಗಿತ್ತು. ತುಂಗಭದ್ರಾ ನದಿ ವಿಪರೀತ ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ನಡೆದಿತ್ತು. ಅದರ ಮುಂದುವರಿದ ಅಂಗವಾಗಿ ಕಡಲೆಹಿಟ್ಟು ಉಚಿತ ವಿತರಣೆಗೆ ಮುಂದಾಗಿದ್ದಾರೆ. ಈ ಮೂಲಕ ನದಿ ಕಲ್ಮಷಗೊಳ್ಳುವುದು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಪುಣ್ಯ ಸ್ನಾನದ ನಂತರ ಬಟ್ಟೆಗಳನ್ನು ನದಿಯಲ್ಲಿ ಎಸೆಯಬೇಡಿ ಎಂದು ಸಂಘಟನೆಗಳು ಮನವಿ ಮಾಡಿವೆ. ಮಾಹಿತಿಗೆ ಮೊ: 9448256122, 9611223288, 8747044368 ರಲ್ಲಿ ಕರೆ ಮಾಡಬಹುದು.