Tuesday, May 30, 2023

Latest Posts

VIRAL VIDEO | ಆಸ್ಕರ್ ಗೆದ್ದ ಬೊಮ್ಮನ್, ಬೆಳ್ಳಿಗೆ ಇಂಡಿಗೋ ವಿಮಾನದಲ್ಲಿ ವಿಶೇಷ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾರ್ತಿಕಿ ಗೋಲ್ಸಾಲ್ವೆಸ್ ನಿರ್ದೇಶನದ ‘ದಿ ಎಲೆಫೆಂಟ್ ವಿಸ್ಪರರ‍್ಸ್’ ಆಸ್ಕರ್ ಗೆದ್ದಿದ್ದು, ಮುಖ್ಯ ಪಾತ್ರಧಾರಿಗಳಾದ ಬೊಮ್ಮನ್ ಮತ್ತು ಬೆಳ್ಳಿ ಕೈಗೆ ಆಸ್ಕರ್ ಪ್ರಶಸ್ತಿ ಬಂದ ಫೋಟೊ ಎಲ್ಲೆಡೆ ವೈರಲ್ ಆಗಿತ್ತು.

ಇದೀಗ ಬೊಮ್ಮನ್ ಹಾಗೂ ಬೆಳ್ಳಿ ಮತ್ತೆ ಸುದ್ದಿಯಲ್ಲಿದ್ದು, ಇಂಡಿಗೋ ವಿಮಾನದಲ್ಲಿ ವಿಶೇಷ ಗೌರವವನ್ನು ಪಡೆದಿದ್ದಾರೆ. ‘ನಿಮ್ಮಲ್ಲಿ ಕೆಲವರಿಗೆ ತಿಳಿದಿಲ್ಲದಿರಬಹುದು, ಆಸ್ಕರ್‌ನಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದ ದಿ ಎಲೆಫೆಂಟ್ ವಿಸ್ಪರರ‍್ಸ್ ಡಾಕ್ಯುಮೆಂಟರಿಯ ಮುಖ್ಯ ಪಾತ್ರಧಾರಿಗಳು ಇಂದು ನಮ್ಮೊಂದಿಗೆ ಪ್ರಯಾಣಿಸುತ್ತಿದ್ದಾರೆ. ಅವರಿಗೆ ಚಪ್ಪಾಳೆ ನೀಡಿ ಹುರಿದುಂಬಿಸಿ’ ಎಂದು ಪೈಲಟ್ ಅನೌನ್ಸ್ ಮಾಡಿದ್ದು, ಪ್ರಯಾಣಿಕರು ಖುಷಿಯಿಂದ ಚಪ್ಪಾಳೆ ತಟ್ಟಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!