ಅಕ್ರಮ ನಿರ್ಮಾಣ: ಬಿಜೆಪಿ ಮುಖಂಡನ ಹೊಟೇಲ್‌ ನೆಲಸಮಗೊಳಿಸಿದ ಜಿಲ್ಲಾಡಳಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಜಗದೀಶ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ರೋಶದ ನಡುವೆಯೇ ಸಾಗರದಲ್ಲಿ ಅಮಾನತುಗೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ಮಿಶ್ರಿ ಚಂದ್ ಗುಪ್ತಾ ಅವರ ಅಕ್ರಮ ಹೋಟೆಲ್ ಅನ್ನು ಜಿಲ್ಲಾಡಳಿತ ಮಂಗಳವಾರ ನೆಲಸಮಗೊಳಿಸಿದೆ.
ಡಿಸೆಂಬರ್ 22 ರಂದು ಜಗದೀಶ್ ಯಾದವ್ ಅವರ ಮೇಲೆ ಎಸ್‌ಯುವಿ ಚಲಾಯಿಸಿ ಹತ್ಯೆಗೈದ ಆರೋಪ ಬಿಜೆಪಿ ಮುಖಂಡರ ಮೇಲಿತ್ತು.
ಇಂದೋರ್‌ನ ವಿಶೇಷ ತಂಡ ಮಂಗಳವಾರ ರಾತ್ರಿ 60 ಡೈನಮೈಟ್‌ಗಳನ್ನು ಸ್ಫೋಟಿಸಿ ಹೊಟೇಲ್ ಅನ್ನು ಕೆಡವಿತು. ಕೆಲವೇ ಸೆಕೆಂಡುಗಳಲ್ಲಿ ಕಟ್ಟಡ ಶಿಲಾಖಂಡರಾಶಿಯಾಗಿ ಮಾರ್ಪಟ್ಟಿತು.

ಸಾಗರ್ ಜಿಲ್ಲಾಧಿಕಾರಿ ದೀಪಕ್ ಆರ್ಯ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ತರುಣ್ ನಾಯಕ್ ಮತ್ತು ಇತರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಹೊಟೇಲ್‌ ತೆರವುಗೊಳಿಸಲಾಯಿತು. ಸುರಕ್ಷತಾ ದೃಷ್ಟಿಯಿಂದ ರಸ್ತೆ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ಸ್ಥಗಿತಗೊಳಿಸಲಾಯಿತು. ಹೋಟೆಲ್ ಸುತ್ತಮುತ್ತಲಿನ ಕಟ್ಟಡಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ರೀತಿಯ ನಷ್ಟ ಆಗದೆ ಹೊಟೇಲ್ ಕಟ್ಟಡವನ್ನು ಮಾತ್ರ ಕೆಡವಲಾಯಿತು ಎಂದು ಜಿಲ್ಲಾಧಿಕಾರಿ ದೀಪಕ್ ಆರ್ಯ ತಿಳಿಸಿದರು.

ಕೋರೆಗಾಂವ್ ನಿವಾಸಿ ಜಗದೀಶ್ ಯಾದವ್ ಅವರು ಡಿಸೆಂಬರ್ 22 ರಂದು ಎಸ್‌ಯುವಿ ಕಾರು ಹರಿದು ಸಾವನ್ನಪ್ಪಿದರು. ಬಿಜೆಪಿ ಮುಖಂಡ ಮಿಶ್ರಿ ಚಂದ್ ಗುಪ್ತಾ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಆರೋಪ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಎಂಟು ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಐವರನ್ನು ಬಂಧಿಸಲಾಗಿದೆ. ಮಿಶ್ರಿ ಚಂದ್ ಗುಪ್ತಾ ತಲೆಮರೆಸಿಕೊಂಡಿದ್ದಾರೆ.

ಮೃತ ಜಗದೀಶ್ ಯಾದವ್ ಅವರು ಸ್ವತಂತ್ರ ಕೌನ್ಸಿಲರ್ ಕಿರಣ್ ಯಾದವ್ ಅವರ ಸೋದರಳಿಯ. ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಕಿರಣ್ ಯಾದವ್ ಅವರು ಮಿಶ್ರಿ ಚಂದ್ ಗುಪ್ತಾ ಅವರ ಪತ್ನಿ ಮೀನಾ ಅವರನ್ನು 83 ಮತಗಳಿಂದ ಸೋಲಿಸಿದರು. ಈ ವೈಷಮ್ಯದಲ್ಲಿ ಜಗದೀಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!