ನಮ್ಮ ಹೋರಾಟ ಹಮಾಸ್ ಉಗ್ರರ ವಿರುದ್ದ, ಎದುರು ಬಂದರೆ ಪರಿಣಾಮ ನೆಟ್ಟಗಿರಲ್ಲ: ಲೆಬೆನಾನ್ ಗೆ ಇಸ್ರೇಲ್ ಪ್ರಧಾನಿ ಎಚ್ಚರಿಕೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಮ್ಮದು ಹಮಾಸ್ ಉಗ್ರರ ವಿರುದ್ದ ಯುದ್ಧ. ಉಗ್ರರನ್ನು ಸಂಪೂರ್ಣ ನಾಶ ಮಾಡದೇ ಬಿಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಲೆಬೆನಾನ್ ಗಡಿಯಿಂದ ಹೆಝ್‌ಬೊಲ್ಹಾ ಉಗ್ರರು ಮತ್ತೆ ರಾಕೆಟ್ ದಾಳಿ ನಡೆಸಿದ್ದು, ಇದರಿಂದ ಕೆರಳಿರುವ ಇಸ್ರೇಲ್ ಪ್ರಧಾನಿ, ಲೆಬೆನಾನ್ ಹಾಗೂ ಹೆಝ್‌ಬೊಲ್ಹಾ ಉಗ್ರರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಹಮಾಸ್ ಉಗ್ರರ ವಿರುದ್ದ ನಾವು ಹೋರಾಡುತ್ತಿದ್ದೇವೆ. ಇದರ ನಡುವೆ ಹೆಝ್‌ಬೊಲ್ಹಾ ಉಗ್ರರು ಲೆಬೆನಾನ್‌ನ್ನು ದೇಶದ ನಡುವೆ ಎಳೆದು ತರುತ್ತಿದ್ದಾರೆ. ಇದು ನೆಟ್ಟಗಿರಲ್ಲ. ಉಗ್ರರ ದಾಳಿ ಮುಂದುವರಿದರೆ ಪ್ರತಿದಾಳಿ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಸಿದ್ದಾರೆ.

ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ದ ಸಿಡಿದೆದ್ದಿದ್ದು, ಇದರ ನಡುವೆ ಲೆಬೆನಾನ್ ಗಡಿಯಿಂದ ದಕ್ಷಿಣ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಯುತ್ತಿದೆ. ಹೀಗಾಗಿ ಹೆಝ್‌ಬೊಲ್ಹಾ ಉಗ್ರರು ನಮ್ಮ ಯುದ್ಧದ ನಡುವೆ ಲೆಬೆನಾನ್ ಎಳೆದುತರಬೇಡಿ. ಇದರ ಪರಿಣಾಮ ನೆಟ್ಟಗಿರಲ್ಲ ಎಂದು ಬೆಂಜಮಿನ್ ಎಚ್ಚರಿಸಿದ್ದಾರೆ.

ಹೆಝ್‌ಬೊಲ್ಹಾ ಯುದ್ಧದ ಲಾಭ ಪಡೆಯುವ ಯತ್ನ ಮಾಡುತ್ತಿದೆ. ಇದು ಅತ್ಯಂತ ಕೆಟ್ಟ ನಡೆಯಾಗಿದೆ. ನಾವು ಗಾಜಾದಲ್ಲಿ ಅಡಗಿರುವ ಉಗ್ರರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿದ್ದೇವೆ. ಇದರ ಮಧ್ಯ ಪ್ರವೇಶಿಸುವ ಧೈರ್ಯವನ್ನು ಹೆಝಬೊಲ್ಹಾ ತೋರಿಸದಿದ್ದರೆ ಲೆಬೆನಾನ್‌ಗೆ ಒಳಿತು. ಇಸ್ರೇಲ್ ಪ್ರತಿದಾಳಿ ಆರಂಭಿಸಿದರೆ ಮುಗಿಸದೇ ನಿಲ್ಲಿಸುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!