ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಜಾಪುರದಿಂದ ಹೆಬ್ಬಾಳದವರೆಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆ `ನಮ್ಮ ಮೆಟ್ರೋ 3ಎ’ ಹಂತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ನಮ್ಮ ಮೆಟ್ರೋ ಜಾಲವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ನಮ್ಮ ಮೆಟ್ರೋದ 3ಎ ಹಂತವಾಗಿರುವ ಕೆಂಪು ಮಾರ್ಗ ಸರ್ಜಾಪುರದಿಂದ ಪ್ರಾರಂಭವಾಗಿ ಕೋರಮಂಗಲ ಮೂಲಕ ಹೆಬ್ಬಾಳಕ್ಕೆ ತಲುಪುವ 36.59 ಕಿ.ಮೀ ಇದಾಗಿದೆ. ಈವರೆಗಿನ ಹಂತಗಳ ಪೈಕಿ ಅತೀ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಮಾರ್ಗ ಇದಾಗಿದೆ.
ಕೆಂಪು ಮಾರ್ಗದ ಪ್ರತಿ ಕಿ.ಮೀ ನಿರ್ಮಾಣಕ್ಕೆ 776 ರೂ. ಕೋಟಿ ತಗುಲಲಿದ್ದು, ಒಟ್ಟು 28,405 ಕೋಟಿ ರೂ. ವೆಚ್ಚದಲ್ಲಿ 36.59 ಕಿಮೀ ಮೆಟ್ರೋ ಮಾರ್ಗ ನಿರ್ಮಿಸಲು ಸಂಪುಟ ತೀರ್ಮಾನಿಸಿದೆ. ಕೆಂಪು ಮಾರ್ಗದ ಮೆಟ್ರೋ ನಿರ್ಮಾಣಗೊಂಡರೆ ನಮ್ಮ ಮೆಟ್ರೋದ ಒಟ್ಟು 258 ಕಿ.ಮೀ. ಮಾರ್ಗ ಸಿದ್ಧವಾಗುತ್ತದೆ.
ಮೆಟ್ರೋ ಸರ್ಜಾಪುರದಿಂದ ಪ್ರಾರಂಭವಾಗಿ ಕಾಡ ಅಗ್ರಹಾರ ರೋಡ್ – ಸೋಂಪುರ – ದೊಮ್ಮಸಂದ್ರ – ಮುತ್ತನಲ್ಲೂರು ಕ್ರಾಸ್ – ಕೊಡತಿ ಗೇಟ್ – ಅಂಬೇಡ್ಕರ್ ನಗರ – ಕಾರ್ಮಲ್ ರಾಂ – ದೊಡ್ಡಕನ್ನೆಲ್ಲಿ – ಕೈಕೊಂಡ್ರಹಳ್ಳಿ – ಬೆಳ್ಳಂದೂರು ಗೇಟ್ – ಇಬ್ಬಲೂರು – ಅಗರ – ಜಕ್ಕಸಂದ್ರ – ಕೋರಮಂಗಲ 3ನೇ ಬ್ಲಾಕ್ – ಕೋರಮಂಗಲ 2ನೇ ಬ್ಲಾಕ್ – ಡೈರಿ ಸರ್ಕಲ್ – ನಿಮ್ಹಾನ್ಸ್ – ಶಾಂತಿನಗರ – ಟೌನ್ ಹಾಲ್ – ಕೆಆರ್ ಸರ್ಕಲ್ – ಬಸವೇಶ್ವರ ಸರ್ಕಲ್ – ಬೆಂಗಳೂರು ಗಾಲ್ಫ್ ಕೋರ್ಸ್ – ಮೇಖ್ರಿ ಸರ್ಕಲ್ – ಪ್ಯಾಲೇಸ್ ಗುಟ್ಟಹಳ್ಳಿ – ವೆಟರ್ನರಿ ಕಾಲೇಜು – ಗಂಗಾನಗರ – ಹೆಬ್ಬಾಳವರೆಗೆ ಪ್ರಯಾಣಿಸಲಿದೆ.