ದಾಖಲೆ ಬರೆದ ನಮ್ಮ ಮೆಟ್ರೋ: ಒಂದೇ ದಿನ ಬೊಕ್ಕಸೆಗೆ ಬಂತು ಕೋಟಿ ಆದಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ರಜತ ಮಹೋತ್ಸವ ಹಿನ್ನೆಲೆ ನಮ್ಮ ಮೆಟ್ರೋದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚಾರ ಮಾಡಿದ್ದಾರೆ . ಇದರಿಂದ ಒಂದೇ ದಿನ ಬರೋಬ್ಬರಿ 5.74 ಲಕ್ಷ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಇತಿಹಾಸ ಸೃಷ್ಟಿಯಾಗಿದೆ.

ಒಂದೆಡೆಆ ದಿನ ಬಿಎಂಟಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ರೆ ಇತ್ತ ನಮ್ಮ ಮೆಟ್ರೋದಲ್ಲಿ ಎಂದಿಗಿಂತ ಅಧಿಕ ಸಂಖ್ಯೆಯಲ್ಲಿ ಜನ ಸಂಚಾರ ಮಾಡಿದರು.ಮಾಮೂಲಿ ದಿನದಲ್ಲಿ ಮೂರೂವರೆ ಲಕ್ಷ ಜನ ಪ್ರಯಾಣ ಮಾಡ್ತಾರೆ. ಆದ್ರೆ ನಿನ್ನೆ ರಜಾದಿನವಾದ್ರೂ ಕೂಡ ಲಾಲ್ಬಾಗ್, ಕಬ್ಬನ ಪಾರ್ಕ್, ವಿಧಾನಸೌಧ ಸೇರಿದಂತೆ ವಿವಿಧ ಕಡೆಗಳಲ್ಲಿ ಅಮೃತ ಮಹೋತ್ಸವ ಹಿನ್ನಲೆ ಅಲಂಕಾರ ಮಾಡಿರುವ ವಿದ್ಯುತ್ ದೀಪಾಲಂಕಾರ ವೀಕ್ಷಿಸಲು ಜನ ಮೆಟ್ರೋ ಪ್ರಯಾಣ ಬೆಳೆಸಿದ್ದಾರೆ.

ಅಲ್ಲದೇ ಕಾಂಗ್ರೆಸ್ ನಡಿಗೆ ಪಾದಯಾತ್ರೆಗೂ ನಮ್ಮ ಮೆಟ್ರೋದಿಂದ ಟಿಕೆಟ್ ಬುಕಿಂಗ್ ಮಾಡಲಾಗಿತ್ತು. ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ನಡಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಕಾರ್ಯಕರ್ತರ ಅನುಕೂಲಕ್ಕಾಗಿ ಕೆಪಿಸಿಸಿ bmrcl ನಿಂದ ಸುಮಾರು 80 ಸಾವಿರ ಟಿಕೆಟ್ ಖರೀದಿ ಮಾಡಿತ್ತು. ಒಂದು ಟಿಕೆಟ್‌ಗೆ 30 ರೂಪಾಯಿಯಂತೆ ಕಾಂಗ್ರೆಸ್ 80 ಸಾವಿರ ಪೇಪರ್ ಟಿಕೆಟ್ ಖರೀದಿ ಮಾಡಿತ್ತು. ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೆಂಗೇರಿಯಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ರು. ಇತ್ತ ನಾಗಸಂದ್ರ, ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಮೆಟ್ರೋದಲ್ಲಿ ಸಂಚಾರ ಮಾಡಿದರು.

ಮೆಟ್ರೋ ಎಂ.ಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದು, ನಿನ್ನೆ ಮೊದಲ ಬಾರಿ 6.30 ಲಕ್ಷ ಜನ ಮೆಟ್ರೋ ಪ್ರಯಾಣ ಮಾಡಿದ್ದು ಇತಿಹಾಸ ಸೃಷ್ಟಿಸಿದ್ದಾರೆ. ದಿನದ ಪಾಸ್ ಇದೇ ಮೊದಲ ಬಾರಿ 500ಕ್ಕೂ ಹೆಚ್ಚು ಮಾರಾಟವಾಗಿದೆ. ರಜಾದಿನವಾದ್ದರಿಂದ ಇಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರು ಮೆಟ್ರೋ ಅವಲಂಬಿಸ್ತಾರೆ ಅನ್ನೋ ನಿರೀಕ್ಷೆ ಇರಲಿಲ್ಲ. ಕಾಂಗ್ರೆಸ್ ಖರೀದಿ ‌ಮಾಡಿದ ಟಿಕೆಟ್ ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಟಿಕೆಟ್ ಪಡೆದು ಪ್ರಯಾಣ ಮಾಡಿದ್ದಾರೆ. ಒಟ್ಟಾರೆಯಾಗಿ ಮೆಟ್ರೋ ನಿಗಮಕ್ಕೆ 1.67 ಕೋಟಿ ರೂಪಾಯಿ ಮೊದಲ ಬಾರಿ ಕಲೆಕ್ಷನ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!