ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರಿಗೆ ನಮ್ಮ ಮೆಟ್ರೋ ಗುಡ್‌ನ್ಯೂಸ್ ನೀಡಿದ್ದು, ನಾಳೆ ಬೆಳಗ್ಗೆ 4:30ರಿಂದಲೇ ಮೆಟ್ರೋ ಸಂಚಾರ ಆರಂಭವಾಗಲಿದೆ.
ವಿಶ್ವಕ್ಯಾನ್ಸರ್ ದಿನದ ಅಂಗವಾಗಿ ಕ್ವಾನ್ವಾಕ್ ಹಾಗೂ ರನಾಥನ್ ಆಯೋಜಿಸಲಾಗಿದ್ದು, ಬಿಸಿಲಿನ ಕಾರಣ ಇವು ಬೆಳಗಿನ ಜಾವವೇ ಆಯೋಜನೆ ಆಗಿರುತ್ತವೆ.
ಇದಕ್ಕೆ ಸಾಕಷ್ಟು ಸಾರ್ವಜನಿಕರು ಭಾಗಿಯಾಗುವ ಸಾಧ್ಯತೆ ಇದ್ದು, ಅವರಿಗಾಗಿ ಬೆಳ್ಳಂಬೆಳಗ್ಗೆ ಮೆಟ್ರೋ ಸಂಚಾರ ನಡೆಯಲಿದೆ