July 9, 2026
Thursday, July 9, 2026
spot_img

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು 13ನೇ ರೈಲು, 5 ನಿಮಿಷಕ್ಕೊಂದು ಮೆಟ್ರೋ ಓಡಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿಗರಿಗೆ ಮೆಟ್ರೋ ಎಂದರೆ ಪ್ರೀತಿ. ಸಿಲಿಕಾನ್‌ ಸಿಟಿಯ ಸಂಚಾರ ದಟ್ಟಣೆಗೆ ತಣ್ಣನೆಯ ಸೊಲ್ಯೂಷನ್‌ ನಮ್ಮ ಮೆಟ್ರೋ!

ನಮ್ಮ ಮೆಟ್ರೋದ ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಅಥವಾ ಹಳದಿ ಮಾರ್ಗಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ. ಬಿಎಂಆರ್‌ಸಿಎಲ್‌ ಸೋಮವಾರ ಹೊಸ ರೈಲನ್ನು ಬರಮಾಡಿಕೊಂಡಿದ್ದು, ಇನ್ಮುಂದೆ ಐದು ನಿಮಿಷಕ್ಕೊಂದು ಮೆಟ್ರೋ ಓಡಾಟ ಸಾಧ್ಯತೆ ಇದೆ.

ಈ ರೈಲಿನಲ್ಲಿ ಆರು ಕೋಚ್‌ಗಳಿವೆ. ನಿನ್ನೆ ರಾತ್ರಿ ಈ ರೈಲು ಹೆಬ್ಬಗೋಡಿ ಡಿಪೋಗೆ ಬಂದಿದ್ದು, ಟ್ರೈಲರ್‌ಗಳಿಂದ ಕೋಚ್‌ಗಳನ್ನು ಕೆಳಗಿಳಿಸುವ ಕೆಲಸ ನಡೆಯುತ್ತಿದೆ. ಸಾರ್ವಜನಿಕರು ಈ ಮೆಟ್ರೋ ಸೇವೆ ಬಳಸುವ ಮುನ್ನ ಸುಮಾರು 750 ಕಿಲೋಮೀಟರ್‌ಗಳಷ್ಟು ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಬೇಕಿದೆ. ಮೆಟ್ರೋ ಸಂಚಾರಕ್ಕೆ ಸಮಸ್ಯೆಯಾಗದಂತೆ ರಾತ್ರಿ ಪರೀಕ್ಷೆ ಮಾಡಲಾಗುತ್ತದೆ. ಪ್ರಸ್ತುತ 19.75 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಪೀಕ್ ಅವರ್‌ನಲ್ಲಿ ರಶ್‌ ಇರುತ್ತದೆ. ಇಲ್ಲಿ ಇನ್ಮುಂದೆ ಐದು ನಿಮಿಷಕ್ಕೊಂದು ಮೆಟ್ರೋ ಸಿಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !