ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಂಚಮಸಾಲಿ ಜಗದ್ಗುರಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದವರ ಮೇಲೆ ಲಾಠಿ ಚಾರ್ಜ್ ಮಾಡಿದ ಘಟನೆಯನ್ನು ಖಂಡಿಸಿ ಸಿಎಂ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಕುರಿತು ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ಲಿಂಗಾಯತರ ಮೇಲಿನ ಲಾಠಿ ಚಾರ್ಚ್ ಖಂಡಿಸಿ ಧರಣಿ ನಡೆಯುತ್ತಿದೆ. ಮುಂದಿನ ಹೋರಾಟದ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು. ಮಾಜಿ ಸಚಿವ ಸಿ.ಸಿ ಪಾಟೀಲ್, ವಿನಯ್ ಕುಲಕರ್ಣಿ ಸೇರಿ ಅನೇಕ ಬಂದಿದ್ರು. ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಲಾಗಿದೆ. ನಾಳೆ ಮದ್ಯಾಹ್ನ ಒಂದು ಗಂಟೆಗೆ ಪ್ರತಿಭಟನೆ ವೇದಿಕೆಯಲ್ಲಿ ಮತ್ತೊಂದು ಸಭೆ ಮಾಡ್ತಿವಿ ಎಂದರು.
ಹೋರಾಟದ ಮುಂದಿನ ಗುರಿ, ಇನ್ನೂ ಮಾತುಕತೆ ಮಾಡಬೇಕಿತ್ತು. ಯತ್ನಾಳ್, ಬೆಲ್ಲದ್ ಅಧಿವೇಶನದಲ್ಲಿ ಇರೋದ್ರಿಂದ ನಾಳೆ ಮದ್ಯಾಹ್ನ ಸಭೆ ನಡೆಸಿ ಮೀಸಲಾತಿ ಪಡೆಯಲು ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡ್ತಿವಿ. ಮೀಸಲಾತಿ ಕೊಡಲು ಆಗಲ್ಲ ಅಂತಾ ಸಿಎಂ ಹೇಳಿದ್ದಾರೆ. ಮೀಸಲಾತಿ ಪಡೆಯಲು ಏನ್ ಮಾಡಬೇಕು ನಾಳೆ ಚರ್ಚೆ ಮಾಡ್ತಿವಿ ಎಂದರು.
ಶಾಸಕ ವಿನಯ್ ಕುಲಕರ್ಣಿ ಸಭೆಗೆ ಬಂದಿದ್ರು, ಡಿಸೆಂಬರ್ 21ರಂದು ಸಿಎಂ ಸಭೆ ಕರೆದಿದ್ದಾರೆ ಎಂದು ಹೇಳಿದ್ದಾರೆ. ಶಾಸಕರು, ಮಾಜಿ ಶಾಸಕರು ಸಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಎಂ ಕ್ಷಮೆ ಕೇಳುವವರೆಗೆ ನಮ್ಮ ಹೋರಾಟ ಮುಂದುವರೆಸುತ್ತೇವೆ. ನನಗೆ ಸಿಎಂ ಸಭೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ, ನನಗೆ ಯಾವುದೇ ಆಮಂತ್ರಣ ಕೂಡ ಬಂದಿಲ್ಲ. ನಮ್ಮ ಮೇಲೆ ಮಾರಣಾಂತಿಕ ಹಲ್ಲೆಯನ್ನು ಸರ್ಕಾರ ಮಾಡಿದೆ. ಘಟನೆ ಬಳಿಕ ಸಾಂತ್ವನ ಮಾತನ್ನು ಹೇಳುವ ಯತ್ನ ಯಾರೊಬ್ಬರು ಮಾಡಿಲ್ಲ. ನಮ್ಮ ಹೋರಾಟ ಅಸವಿಂಧಾನಕ ಎಂದು ಹೇಳಿದ್ದಾರೆ.
ಒಬ್ಬರು ಸಚಿವರು ಹೋರಾಟ ಆರಂಭವಾದಗಿನಿಂದ ಈ ಕಡೆ ಮುಖ ಹಾಕಿಲ್ಲ. ಸಚಿವೆ ಹೆಬ್ಬಾಳ್ಕರ್ ಮೇಲೆ ಸಿಎಂ ಒತ್ತಡ ಹಾಕಿರುವ ಕಾರಣಕ್ಕೆ ಬಂದಿಲ್ಲ, ಈ ಹಿಂದೆ ಅನೇಕ ಸಲ ಬಂದು ಬೆಂಬಲ ಕೊಟ್ಟಿದ್ದಾರೆ, ಹೆಬ್ಬಾಳ್ಕರ್ ಮೇಲೆ ಮನಸ್ಸಿಗೆ ನೋವು ಆಗೋ ಹಾಗೆ ಸಿಎಂ ಒತ್ತಡ ಹಾಕಿದ್ದಾರೆ. ಲಿಂಗಾಯತ ಶಾಸಕರು ನೋವನ್ನು ನುಂಗಿಕೊಂಡು ಮೌನವಾಗಿದ್ದಾರೆ. ಸಚಿವೆ ಹೆಬ್ಬಾಳ್ಕರ್ ಗೊಂದಲಕ್ಕೆ ಒಳಪಟ್ಟಿದ್ದಾರೆ. ಕುಲಕರ್ಣಿ, ಕಾಗೆ ಇಬ್ಬರ ನಿಲವು ಸ್ಪಷ್ಟವಾಗಿದೆ. ಈ ಸರ್ಕಾರದಲ್ಲಿ ಗಟ್ಟಿಯಾಗಿ ಇರೋದು ಪುಣ್ಯ ಎಂದು ಆಕ್ರೋಶ ಹೊರಹಾಕಿದರು.