ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹದಿನೈದು ದಿನಗಳಲ್ಲಿ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ಘೋಷಿಸಿದ್ದಾರೆ.
ಈ ಮೂಲಕ ಸ್ವಾತಂತ್ರ್ಯದ ನಂತರ ಯುಸಿಸಿಯನ್ನು (UCC) ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಉತ್ತರಾಖಂಡವಾಗಿದೆ.
ಡಿಜಿಟಲ್ ಕ್ರಮಗಳು, ಆನ್‌ಲೈನ್ ಮಾಧ್ಯಮದ ಮೂಲಕ ನೋಂದಣಿ, ಮನವಿ ಮತ್ತು ಇತರ ಸೇವೆಗಳನ್ನು ಜನರಿಗೆ ಅನುಕೂಲಕರವಾಗಿಸುತ್ತದೆ ಎಂದು ನಂಬಿರುವ ಬಿಜೆಪಿ (BJP) ನೇತೃತ್ವದ ಸರ್ಕಾರವು ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಇದಕ್ಕಾಗಿ ಸಿದ್ಧಪಡಿಸಿದೆ.
ಜನವರಿ 2025 ರಿಂದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು. ಉತ್ತರಾಖಂಡವನ್ನು ನ್ಯಾಯಯುತ ಮತ್ತು ಸಮಾನಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾ, ನಾವು ಜನವರಿ 2025 ರಿಂದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ. ಈ ಕುರಿತು ಇಂದಿನ, UIIDB ಸಭೆಯಲ್ಲಿ, ಅಗತ್ಯ ಸೂಚನೆಗಳನ್ನು ನೀಡಲಾಯಿತು. ಈ ವಿಷಯದ ಬಗ್ಗೆ ಅಧಿಕಾರಿಗಳು ಎಂದುಸಿಎಂ ಧಾಮಿ X ನಲ್ಲಿ ಬರೆದಿದ್ದಾರೆ.
ಒಂದು ಕಡೆ ಸಾಮಾಜಿಕ ಸಮಾನತೆ ಮತ್ತು ಏಕತೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಈ ಹೆಜ್ಜೆ ಮೈಲಿಗಲ್ಲು ಎಂದು ಸಾಬೀತುಪಡಿಸಿದರೆ, ಮತ್ತೊಂದೆಡೆ, ನಮ್ಮ ರಾಜ್ಯವು ಇತರ ರಾಜ್ಯಗಳಿಗೆ ಮಾರ್ಗದರ್ಶಕವಾಗಿ ಹೊರಹೊಮ್ಮಲಿದೆ ಎಂದು ಸಿಎಂ ಹೇಳಿದರು.
ಇನ್ನು ರಾಷ್ಟ್ರಪತಿಗಳು ಮಾರ್ಚ್ 11 ರಂದು ಭಾರತದ ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ಏಕರೂಪ ನಾಗರಿಕ ಸಂಹಿತೆ, ಉತ್ತರಾಖಂಡ್, 2024 ಗೆ ಒಪ್ಪಿಗೆ ನೀಡಿದರು.
ಮಸೂದೆಯಲ್ಲಿರುವ ಕೆಲವು ಪ್ರಮುಖ ಅಂಶಗಳು
ಬಹುಪತ್ನಿತ್ವವನ್ನು ನಿಷೇಧಿಸಲಾಗುವುದು.
ಮದುವೆಗೆ ಕಾನೂನುಬದ್ಧ ವಯಸ್ಸನ್ನು 21 ವರ್ಷಕ್ಕೆ ನಿಗದಿಪಡಿಸಲಾಗುವುದು
ಲಿವ್ ಇನ್ ರಿಲೇಷನ್ನಲ್ಲಿ ಇರಲು ಬಯಸುವವರು ನೋಂದಣಿ ಮಾಡಿಸಿಕೊಳ್ಳಬೇಕು.
ಉತ್ತರಾಖಂಡದ ವೆಬ್ ಪೋರ್ಟಲ್‌ನಲ್ಲಿ ಲೈವ್-ಇನ್ ಸಂಬಂಧಗಳನ್ನು ನೋಂದಾಯಿಸುವುದು ಅಗತ್ಯ
ನೋಂದಣಿ ಮಾಡದಿದ್ದಲ್ಲಿ ದಂಪತಿಗೆ ಆರು ತಿಂಗಳ ಜೈಲು ಶಿಕ್ಷೆ ಅಥವಾ 25,000 ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸಬಹುದು
ಏಕರೂಪ ನಾಗರಿಕ ಸಂಹಿತೆಗಾಗಿ ಉತ್ತರಾಖಂಡ ಸರ್ಕಾರವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನ್ ಪ್ರಕಾಶ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಐದು ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಎರಡು ವರ್ಷಗಳಿಂದ ಮಸೂದೆ ರಚನೆಗಾಗಿ ಸುದೀರ್ಘ ಕಸರತ್ತು ನಡೆಸಿತ್ತು. ಐದು ದಿನಗಳ ಹಿಂದೆ 740 ಪುಟಗಳ ಕರಡು ಸಮಿತಿ ವರದಿಯನ್ನು ಸಿಎಂಗೆ ಸಲ್ಲಿಸಲಾಗಿತ್ತು.