ಯಾವುದೇ ರಾಷ್ಟ್ರಕ್ಕೆ ಹೋದರೂ ಭಾರತಕ್ಕೆ ವಿಶ್ವಮನ್ನಣೆ ತಂದು‌ಕೊಟ್ಟ ಸರ್ಕಾರ ನಮ್ಮದು: ಸಿ.ಟಿ.ರವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹನ್ನೊಂದು‌ ಚುನಾವಣೆಗಳಲ್ಲಿ‌ ಜಯಗಳಿಸಿ ದಾಖಲೆಗೆ ಕಾರಣರಾದ ರಮೇಶ ಜಿಗಜಿಣಗಿ ಅವರ ಸರಳ‌ ಸ್ವಭಾವ, ಜನೋಪಯೋಗಿ ಕೆಲಸ, ಕಾರ್ಯಕರ್ತರ ಬೆಂಬಲ ಆಧರಿಸಿ ಈ ಬಾರಿ ವಿಜಯಪುರ ಜನತೆ ಜಿಗಜಿಣಗಿ ಅವರನ್ನು ಆಶಿರ್ವದಿಸುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿಯ ಮಾಜಿ‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ವಿಜಯಪುರಕ್ಕೆ ನಾಮಪತ್ರ ಸಲ್ಲಿಸಲು ಆಗಮಿಸಿದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ದೇಶದಲ್ಲೆಡೆ ಮೋದಿ ಅಲೆ ಬೀಸುತ್ತಿರುವ ಸಂದರ್ಭದಲ್ಲಿ ವಿಜಯಪುರಕ್ಕೆ ಜಿಗಜಿಣಗಿ, ದೇಶಕ್ಕೆ ಮೋದಿ ಎಂಬ ಘೋಷವಾಕ್ಯದೊಂದಿಗೆ ಮತಯಾಚನೆ ಮಾಡುತ್ತಿದ್ದೇವೆ ಎಂದರು.

2014 ರವರೆಗೆ, ಪತ್ರಿಕೆಗಳಲ್ಲಿ ಹಗರಣಗಳು ಮಾತ್ರ ಸುದ್ದಿಗಳಿರುತ್ತಿದ್ದವು. ಹಗರಣಗಳ ಬದಲಾಗಿ ಈಗ ಯೋಜನೆಯ ಸದ್ದು, ಧನಾತ್ಮಕ ಬದಲಾವಣೆಗಳು ನಡೆದಿವೆ. ಆರ್ಥಿಕ ಬಡತನದ ಸುಳಿಯಲ್ಲಿ ಸಿಲುಕಿದ ಭಾರತ ಈಗ ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಈ ಬದಲಾವಣೆಗಳಿಗೆ ನಮ್ಮ ನೀತಿಗಳು, ನಾಯಕತ್ವ ಮತ್ತು ಶಿಸ್ತು ಕಾರಣ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!